ಗುರುವಾರ , ಮಾರ್ಚ್ 4, 2021
29 °C

ಜಡೇಜ ಉತ್ತಮ ಬ್ಯಾಟಿಂಗ್‌: ಮಾಂಜ್ರೇಕರ್ ಕಾಲೆಳೆದ ನೆಟ್ಟಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವೀಕ್ಷಕ ವಿವರಣೆಕಾರ, ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಇಂದಿನ ಬ್ಯಾಟಿಂಗ್‌ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ರವೀಂದ್ರ ಜಡೇಜ 76 ರನ್‌ಗಳನ್ನು ಸಿಡಿಸುವ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು. ಆದರೆ ಅಂತಿಮ ಹಂತದಲ್ಲಿ ಭಾರತಕ್ಕೆ ಜಯ ದೊರೆಯಲಿಲ್ಲ. ಈ ಪಂದ್ಯದಲ್ಲಿ ರವೀಂದ್ರ ಜಡೇಜ ಅಕ್ರಮಣಕಾರಿಯಾಗಿ ಆಡಿದ್ದರು.

ಇದಕ್ಕೆ ಸಂಜಯ್ ಮಾಂಜ್ರೇಕರ್ ಜಡೇಜ ಉತ್ತಮ ಆಟವಾಡಿದ್ದಾರೆ ಎಂದು ಟ್ವೀಟ್‌ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವಿಶ್ವಕಪ್‌ ಟೂರ್ನಿಯಲ್ಲಿ ಮಾಂಜ್ರೇಕರ್ ಮತ್ತು ಜಡೇಜ ನಡುವಿನ ಟ್ವೀಟ್‌ ವಾರ್ ತಾರಕಕ್ಕೆ ಏರಿತ್ತು. 

ಭಾರತ ಮತ್ತು ಇಂಗ್ಲೆಂಡ್ ನಡುವಣದ ಪಂದ್ಯದ ಸಂದರ್ಭದಲ್ಲಿ ಮಾಂಜ್ರೇಕರ್ ತಮ್ಮ ಕಾಮೆಂಟ್ರಿಯಲ್ಲಿ, ‘ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಸದ್ಯ 50 ಓವರ್‌ಗಳ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜ ಅದೇ ತರಹ ಇದ್ದಾರೆ ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಜಡೇಜ ‘ನೀವು ಆಡಿರುವ ಪಂದ್ಯಗಳಿಗಿಂತ ದುಪ್ಟಟ್ಟು ಸಂಖ್ಯೆಯ ಪಂದ್ಯಗಳಲ್ಲಿ ಆಡಿದ್ದೇನೆ. ಬೇರೆಯವರು ಪರಿಶ್ರಮ ಮತ್ತು ಪ್ರತಿಭೆಯಿಂದ ಸಾಧನೆ ಮಾಡಿದವರನ್ನು ಗೌರವಿಸುವುದನ್ನು ಕಲಿಯಿರಿ ಎಂದು ಖಾರವಾಗಿ ಹೇಳಿದ್ದರು. 

ಇದೀಗ ನ್ಯೂಜಿಲೆಂಡ್‌ ವಿರುದ್ಧ ಪಂದ್ಯದಲ್ಲಿ ಜಡೇಜ ಉತ್ತಮವಾಗಿ ಆಡಿರುವುದಕ್ಕೆ ಟ್ವೀಟಿಗರು ಮಾಂಜ್ರೇಕರ್ ಅವರ ಕಾಲೆಳೆದು ಟೀಕಿಸಿದ್ದಾರೆ. ಇಂತಹ ಹಲವು ಟ್ರೋಲ್‌ಗಳು ಇಲ್ಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು