ಮಂಗಳವಾರ, ಜನವರಿ 18, 2022
16 °C

ಭಾರತ ವಿರುದ್ಧದ ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ತಂಡಕ್ಕೆ ಮಾರ್ಕೊ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೋಹಾನ್ಸ್‌ಬರ್ಗ್: ಭಾರತ ತಂಡದ ಎದುರು ಆಡಲಿರುವ ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ತಂಡಕ್ಕೆ ಬೌಲರ್ ಮಾರ್ಕೊ ಜೆನ್ಸನ್ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ಅವಕಾಶ ಲಭಿಸಿದೆ. ತೆಂಬಾ ಬವುಮಾ ತಂಡದ ನಾಯಕತ್ವ ವಹಿಸಲಿದ್ದಾರೆ. ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಎಡಗೈ ವೇಗಿ ಮಾರ್ಕೊ ಪದಾರ್ಪಣೆ ಮಾಡಿದ್ದರು. 

ತಂಡ: ತೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿಕಾಕ್, ಝುಬೇರ್ ಹಮ್ಜಾ, ಮಾರ್ಕೊ ಜೆನ್ಸನ್, ಜೆನ್‌ಮನ್ ಮಲಾನ್, ಸಿಸಾಂದಾ ಮಗಾಲಾ, ಏಡನ್ ಮಾರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ವೇಯ್ನ್ ಪಾರ್ನೆಲ್, ಆ್ಯಂಡಿಲ್ ಪಿಶುವಾಯೊ, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ರೆಸಿ ವ್ಯಾಡ್ ಡೆರ್ ಡಸೆ, ಕೈಲ್ ವೆರೆನ್. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು