ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಡರ್‌– ಗಾವಸ್ಕರ್ ಟ್ರೋಫಿ: ನ.22ರಿಂದ ಮೊದಲ ಟೆಸ್ಟ್‌

Published 26 ಮಾರ್ಚ್ 2024, 22:28 IST
Last Updated 26 ಮಾರ್ಚ್ 2024, 22:28 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್‌– ಗಾವಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯು ನ.22ರಂದು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಹೇಳಿದೆ.

ಈ ಸರಣಿಯನ್ನು 1991–92ರ ಬಳಿಕ ಇದೇ ಮೊದಲ ಬಾರಿಗೆ ಐದು ಪಂದ್ಯಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ನಾಲ್ಕು ಪಂದ್ಯಗಳಿಗೆ ಸೀಮಿತವಾಗಿತ್ತು.

ಅಡಿಲೇಡ್‌ನಲ್ಲಿ ಡಿ.6ರಿಂದ ನಡೆಯುವ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೂ (ಹಗಲು– ರಾತ್ರಿ) ಮುನ್ನ ಆ ಚೆಂಡಿನೊಂದಿಗೆ ಅಭ್ಯಾಸ ನಡೆಸಲು ಒಂಬತ್ತು ದಿನಗಳ ಅಂತರವನ್ನು ನೀಡಲಾಗಿದೆ. ಹಿಂದಿನ ಪ್ರವಾಸದಲ್ಲಿ ಭಾರತವು ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋತಿತ್ತು.

ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಸತತ ಎರಡು ಟೆಸ್ಟ್ ಸರಣಿಗಳಲ್ಲಿ ಭಾರತ ಸೋಲಿಸಿದೆ. ಅಲ್ಲದೆ, ಉಭಯ ತಂಡಗಳ ನಡುವಿನ ಸತತ ನಾಲ್ಕು ಸರಣಿಗಳನ್ನು ಗೆದ್ದಿರುವ ಭಾರತ, ಈ ಬಾರಿಯೂ ಪರಾಕ್ರಮ ಮೆರೆಯುವ ವಿಶ್ವಾಸದಲ್ಲಿವೆ.

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು ಮಣಿಸಿ ಚಾಂಪಿಯನ್ ಕಿರೀಟ ಧರಿಸಿತ್ತು. ಇದೀಗ ಅವರ ನೆಲದಲ್ಲೇ ಮುಯ್ಯಿ ತೀರಿಸಿಕೊಳ್ಳುವ ಅವಕಾಶವೂ ಭಾರತದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT