ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20 ಕ್ರಿಕೆಟ್‌: ರೋಹಿತ್ ದಾಖಲೆ ಸರಿಗಟ್ಟಿದ ಮ್ಯಾಕ್ಸ್‌ವೆಲ್

Published 11 ಫೆಬ್ರುವರಿ 2024, 18:32 IST
Last Updated 11 ಫೆಬ್ರುವರಿ 2024, 18:32 IST
ಅಕ್ಷರ ಗಾತ್ರ

ಅಡಿಲೇಡ್‌: ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ದಾಖಲೆಯ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 34 ರನ್‌ಗಳಿಂದ ಜಯ ಸಾಧಿಸಿತು.

ಟಿ20 ಕ್ರಿಕೆಟ್‌ ಮಾದರಿಯಲ್ಲಿ 35 ವರ್ಷದ ಮ್ಯಾಕ್ಸ್‌ವೆಲ್‌ ದಾಖಲಿಸಿದ ಐದನೇ ಶತಕ ಇದಾಗಿದೆ. ಈ ಮೂಲಕ ಅವರು ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.  ಈ ಸಾಧನೆಯನ್ನು ರೋಹಿತ್‌ 143 ಇನಿಂಗ್ಸ್‌ಗಳಲ್ಲಿ ಮಾಡಿದ್ದರೆ, ಮ್ಯಾಕ್ಸ್‌ವೆಲ್‌ 93 ಇನಿಂಗ್ಸ್‌ಗಳಲ್ಲಿ ಪೂರೈಸಿದರು.

ಗ್ಲೆನ್ ಅವರು 50 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಅಬ್ಬರದ  (ಔಟಾಗದೆ 120, 55ಎ, 4x12, 6x8)  ಬ್ಯಾಟಿಂಗ್‌ ಬಲದಿಂದ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 241 ರನ್‌ ಗಳಿಸಿತು. ಬೃಹತ್‌ ಗುರಿಯನ್ನು ಬೆನ್ನಟ್ಟಿದ ವಿಂಡೀಸ್‌ ಪಡೆ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 207 ರನ್‌ ಗಳಿಸಲಷ್ಟೇ ಶಕ್ತವಾಯಿತು. ನಾಯಕ ರೋವ್ಮನ್ ಪೊವೆಲ್ (63, 36ಎ) ಕೊಂಚ ಪ್ರತಿರೋಧ ತೋರಿದರು.

ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಇರುವಂತೆ ಆತಿಥೇಯ ತಂಡವು 2–0ಯಿಂದ ಕೈವಶ ಮಾಡಿಕೊಂಡಿದೆ. ಮೂರನೇ ಪಂದ್ಯವು ಮಂಗಳವಾರ ಪರ್ತ್‌ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 241 (ಮಿಚೆಲ್‌ ಮಾರ್ಷ್‌ 29, ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟಾಗದೆ 120, ಟಿಮ್‌ ಡೇವಿಡ್‌ ಔಟಾಗದೆ 31; ಜೇಸನ್ ಹೋಲ್ಡರ್ 42ಕ್ಕೆ 2). ವೆಸ್ಟ್‌ ಇಂಡೀಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 207 (ರೋವ್ಮನ್‌ ಪೊವೆಲ್‌ 63, ಆ್ಯಂಡ್ರೆ ರಸೆಲ್ 37; ಮಾರ್ಕಸ್ ಸ್ಟೊಯಿನಿಸ್ 36ಕ್ಕೆ 3, ಜೋಷ್‌ ಹ್ಯಾಜಲ್ ವುಡ್ 31ಕ್ಕೆ 2, ಸ್ಪೆನ್ಸರ್ ಜಾನ್ಸನ್ 39ಕ್ಕೆ 2). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 34 ರನ್‌ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT