ಸೋಮವಾರ, ಜುಲೈ 4, 2022
21 °C

IPL: ಪಂಜಾಬ್ ಕಿಂಗ್ಸ್‌ಗೆ ಮಯಂಕ್ ಅಗರವಾಲ್ ಕ್ಯಾಪ್ಟನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದ ಮಯಂಕ್ ಅಗರವಾಲ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಪಂಜಾಬ್ ಕಿಂಗ್ಸ್ ತಂಡಕ್ಕೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ. 

ಭಾರತ ಕ್ರಿಕೆಟ್ ತಂಡದ ಆಟಗಾರ ಮಯಂಕ್ ಕಳೆದ ಕೆಲವು ವರ್ಷಗಳಿಂದ ಕಿಂಗ್ಸ್‌ನಲ್ಲಿದ್ದಾರೆ. ಕಳೆದೆರಡು ಆವೃತ್ತಿಗಳಲ್ಲಿ ಅವರು 400ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದರು. 2011ರಲ್ಲಿ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದ ಮಯಂಕ್ ಇಲ್ಲಿಯವರೆಗೆ 100 ಪಂದ್ಯಗಳನ್ನು ಆಡಿದ್ದಾರೆ. 

ಈಚೆಗೆ ಮೆಗಾ ಹರಾಜು ಸಂದರ್ಭದಲ್ಲಿ ಪಂಜಾಬ್ ತಂಡವು ಕೆ.ಎಲ್. ರಾಹುಲ್ ಅವರನ್ನು ಬಿಡುಗಡೆ ಮಾಡಿತ್ತು. ಆದರೆ, ಮಯಂಕ್ ಅವರನ್ನು ಉಳಿಸಿಕೊಂಡಿತ್ತು.  ರಾಹುಲ್ ಈ ಬಾರಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.

‘ಮಯಂಕ್ ಅಗರವಾಲ್ ನಾಯಕತ್ವ ವಹಿಸುವುದು ಬಹುತೇಕ ಖಚಿತ. ಈ ವಾರಾಂತ್ಯದಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ’ ಎಂದು ಐಪಿಎಲ್ ಮೂಲಗಳು ತಿಳಿಸಿವೆ. 

ಈಚೆಗೆ ನಡೆದ ಹರಾಜಿನಲ್ಲಿ ತಂಡವು ಅನುಭವಿ ಆಟಗಾರರಾದ ಶಿಖರ್ ಧವನ್, ಜಾನಿ ಬೆಸ್ಟೊ, ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೊ ರಬಾಡ, ತಮಿಳುನಾಡಿನ ಬ್ಯಾಟರ್ ಶಾರೂಕ್ ಖಾನ್ ಮತ್ತು ಎಡಗೈ ಸ್ಪಿನ್ನರ್ ಹರಪ್ರೀತ್ ಬ್ರಾರ್ ಅವರನ್ನು ಖರೀದಿಸಿತ್ತು. ಧನವ್ ನಾಯಕರಾಗುವ ಕುರಿತು ಮಾತುಗಳು ಕೇಳಿಬಂದಿದ್ದವು. ಆದರೆ, ತಂಡದ ಆಡಳಿತವು ಮಯಂಕ್ ಅವರನ್ನು ನೇಮಕ ಮಾಡುವತ್ತ ಒಲವು ಹೊಂದಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು