ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಂತ್ ಶತಕ; ಬೆಳಗಿದ ಆದಿತ್ಯ

ವೈ.ಎಸ್‌.ಆರ್‌ ಟ್ರೋಫಿ ಕ್ರಿಕೆಟ್ ಟೂರ್ನಿ: ಮರ್ಚಂಟ್ಸ್‌, ನ್ಯಾಷನಲ್, ಚಾಮರಾಜಪೇಟೆ ತಂಡಗಳಿಗೆ ಜಯ
Last Updated 24 ನವೆಂಬರ್ 2020, 3:16 IST
ಅಕ್ಷರ ಗಾತ್ರ

ಬೆಂಗಳೂರು: ಮರ್ಚಂಟ್ಸ್ ಕ್ರಿಕೆಟ್ ಕ್ಲಬ್‌, ನ್ಯಾಷನಲ್ ಕ್ರಿಕೆಟರ್ಸ್‌ ಮತ್ತು ಚಾಮರಾಜಪೇಟೆ ಕ್ರಿಕೆಟ್ ಕ್ಲಬ್ ತಂಡಗಳು ನಗರದಲ್ಲಿ ಸೋಮವಾರ ನಡೆದ ವೈ.ಎಸ್‌.ರಾಮಸ್ವಾಮಿ ಸ್ಮಾರಕ ಟೂರ್ನಿಯಲ್ಲಿ ಜಯ ಗಳಿಸಿದವು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದಿತ್ಯ ಕೆ.ಎಸ್‌. ಅವರ ಅಮೋಘ ಬೌಲಿಂಗ್ ಮತ್ತು ಯಶಸ್–ಆದಿತ್ಯ ಎನ್‌.ಜಿ ಜೋಡಿಯ ಮೋಹಕ ಬ್ಯಾಟಿಂಗ್ ಬಲದಿಂದ ಮರ್ಚಂಟ್ಸ್ ಕ್ರಿಕೆಟ್ ಕ್ಲಬ್ ಎಂಟು ವಿಕೆಟ್‌ಗಳಿಂದ ಇಂದಿರಾನಗರ ಕ್ರಿಕೆಟರ್ಸ್‌ ತಂಡವನ್ನು ಮಣಿಸಿತು.

ಸ್ಟಾರ್ ಕ್ರಿಕೆಟರ್ಸ್ ಎದುರಿನ ಪಂದ್ಯದಲ್ಲಿ ನ್ಯಾಷನಲ್ ಕ್ರಿಕೆಟರ್ಸ್ 36 ರನ್‌ಗಳಿಂದ ಜಯ ಗಳಿಸಿತು. ಚಾಮರಾಜಪೇಟೆ ಕ್ರಿಕೆಟ್ ಕ್ಲಬ್‌ ಎಂಟು ವಿಕೆಟ್‌ಗಳಿಂದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ ವಿರುದ್ಧ ಗೆಲುವು ಸಾಧಿಸಿತು. ಹೇಮಂತ್ ಕುಮಾರ್ ಅವರು ಅಜೇಯ 119 (79 ಎಸೆತ; 10 ಬೌಂಡರಿ, 6 ಸಿಕ್ಸರ್) ರನ್‌ ಗಳಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರು: ಇಂದಿರಾನಗರ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 9ಕ್ಕೆ 162 (ಮಾಧವೇಶ್ 43; ಸಾಗರ್ 40ಕ್ಕೆ2, ಆದಿತ್ಯ ಕೆ.ಎಸ್‌ 18ಕ್ಕೆ5); ಮರ್ಚಂಟ್ಸ್ ಕ್ರಿಕೆಟ್ ಕ್ಲಬ್‌: 31.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 163 (ಯಶಸ್‌ ಔಟಾಗದೆ 55, ಆದಿತ್ಯ ಎನ್‌.ಜ 77). ಫಲಿತಾಂಶ: ಮರ್ಚಂಟ್ಸ್ ಕ್ರಿಕೆಟ್ ಕ್ಲಬ್‌ಗೆ 8 ವಿಕೆಟ್‌ಗಳ ಜಯ.

ನ್ಯಾಷನಲ್ ಕ್ರಿಕೆಟರ್ಸ್‌: 42.5 ಓವರ್‌ಗಳಲ್ಲಿ 152 (ಆದಿತ್ಯ ರಮೇಶ್ 26, ಪವನ್ ಯಾದವ್ 39; ಹರೀಶ್ 30ಕ್ಕೆ3, ನವೀನ್ ಶರ್ಮಾ 12ಕ್ಕೆ4); ಸ್ಟಾರ್ ಕ್ರಿಕೆಟರ್ಸ್ ಇಲೆವನ್‌: 36.2 ಓವರ್‌ಗಳಲ್ಲಿ 116ಕ್ಕೆ ಆಲೌಟ್‌ (ಕೈವಲ್ಯ 28ಕ್ಕೆ4, ಆಶಿಶ್ ನಾಯಕ್ 19ಕ್ಕೆ2, ರಾಜಾ ಶಂಕರ್ 22ಕ್ಕೆ3). ಫಲಿತಾಂಶ: ನ್ಯಾಷನಲ್ ಕ್ರಿಕೆಟರ್ಸ್‌ಗೆ 36 ರನ್‌ಗಳ ಜಯ.

ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 6ಕ್ಕೆ 179 (ಧನುಷ್‌ 31, ಶ್ರವಣ್ ಔಟಾಗದೆ 74; ಸುನಿಲ್ 38ಕ್ಕೆ2). ಚಾಮರಾಜಪೇಟೆ ಕ್ರಿಕೆಟ್ ಕ್ಲಬ್‌: 23.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 181 (ಹೇಮಂತ್ ಕುಮಾರ್ ಔಟಾಗದೆ 119). ಫಲಿತಾಂಶ: ಚಾಮರಾಜಪೇಟೆ ಕ್ರಿಕೆಟ್ ಕ್ಲಬ್‌ಗೆ 8 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT