ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರೀಮಿಯರ್‌ ಲೀಗ್ ಫೈನಲ್: ಮುಂಬೈ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ

Last Updated 26 ಮಾರ್ಚ್ 2023, 13:47 IST
ಅಕ್ಷರ ಗಾತ್ರ

ಮುಂಬೈ: ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ ಹುಟ್ಟುಹಾಕಿರುವ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಟೂರ್ನಿಯ ಚೊಚ್ಚಲ ಕಿರೀಟಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಇಂದು ಮುಖಾಮುಖಿಯಾಗಿವೆ. ಟಾಸ್‌ ಗೆದ್ದಿರುವ ಡೆಲ್ಲಿ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಪಂದ್ಯವು ಇಲ್ಲಿನ ಬ್ರೆಬೊರ್ನ್‌ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ.

ಮೆಗ್‌ ಲ್ಯಾನಿಂಗ್‌ ನೇತೃತ್ವದ ಡೆಲ್ಲಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್‌ ಪ್ರವೇಶಿಸಿದ್ದರೆ, ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ದದ ಮುಂಬೈ ಇಂಡಿಯನ್ಸ್‌ ತಂಡ ‘ಎಲಿಮಿನೇಟರ್‌’ನಲ್ಲಿ ಗೆದ್ದು ಪ್ರಶಸ್ತಿ ಸುತ್ತು ತಲುಪಿದೆ. ಶುಕ್ರವಾರ ನಡೆ ದಿದ್ದ ‘ಎಲಿಮಿನೇಟರ್‌’ನಲ್ಲಿ ಮುಂಬೈ, 72 ರನ್‌ಗಳಿಂದ ಯುಪಿ ವಾರಿಯರ್ಸ್‌ ವಿರುದ್ಧ ಗೆದ್ದಿತ್ತು.

ಲೀಗ್‌ ಹಂತದಲ್ಲಿ ಇವೆರಡು ತಂಡಗಳು ಮೊದಲ ಬಾರಿ ಎದುರಾಗಿದ್ದಾಗ ಮುಂಬೈ ಇಂಡಿಯನ್ಸ್‌ 9 ವಿಕೆಟ್‌ಗಳಿಂದ ಗೆದ್ದಿತ್ತು. ಆದರೆ ಎರಡನೇ ಸಲ ಡೆಲ್ಲಿ ತಂಡ ಅಷ್ಟೇ ಅಂತರದಿಂದ ಗೆದ್ದು ಸೇಡು ತೀರಿಸಿಕೊಂಡಿತ್ತು. ಇದೀಗ ಮೂರನೇ ಬಾರಿ ಪರಸ್ಪರ ಎದುರಾಗಿವೆ. ಹೀಗಾಗಿ ಗೆಲುವು ಯಾರ ಕೈಹಿಡಿಯಲಿದೆ ಎಂಬ ಕುತೂಹಲ ಗರಿಗೆದರಿದೆ.

ಆಡುವ ಹನ್ನೊಂದರ ಬಳಗ
ಡೆಲ್ಲಿ ಕ್ಯಾಪಿಟಲ್ಸ್‌: ಮೆಗ್‌ ಲ್ಯಾನಿಂಗ್‌ (ನಾಯಕಿ), ಜೆಮಿಮಾ ರಾಡ್ರಿಗಸ್‌, ಶಫಾಲಿ ವರ್ಮಾ, ಜೆಸ್‌ ಜೊನಾಸೆನ್, ಅಲೀಸ್‌ ಕ್ಯಾಪ್ಸಿ, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ, ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ಮೆರಿಜಾನೆ ಕಾಪ್

ಮುಂಬೈ ಇಂಡಿಯನ್ಸ್‌: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ನಥಾಲಿ ಸಿವೆರ್‌ ಬ್ರಂಟ್, ಅಮೇಲಿ ಕೆರ್, ಪೂಜಾ ವಸ್ತ್ರಕರ್‌, ಯಷ್ಟಿಕಾ ಭಾಟಿಯಾ, ಇಸಾಬೆಲ್‌ ವಾಂಗ್, ಅಮನ್‌ಜ್ಯೋತ್‌ ಕೌರ್, ಸೈಕಾ ಇಶಾಕ್, ಹೆಯಿಲಿ ಮ್ಯಾಥ್ಯೂಸ್, ಜಿಂತಮಣಿ ಕಲಿತಾ, ಹುಮೇರಾ ಖಾಜಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT