ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್: ಚಾಂಪಿಯನ್ ಮುಂಬೈ ಎದುರು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ

Published 23 ಫೆಬ್ರುವರಿ 2024, 14:46 IST
Last Updated 23 ಫೆಬ್ರುವರಿ 2024, 14:46 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಮತ್ತು ಕಳೆದ ಬಾರಿಯ ರನ್ನರ್ಸ್‌ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಇಂಡಿಯನ್ಸ್‌, ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಮೆಗ್ ಲ್ಯಾನಿಂಗ್, ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನಿಂಗ್ಸ್‌ ಆರಂಭಿಸುವ ಹೊಣೆಯನ್ನೂ ಅವರು ಹೊತ್ತುಕೊಂಡಿದ್ದಾರೆ.

ಸದ್ಯ ಎರಡು ಓವರ್‌ ಮುಕ್ತಾಯವಾಗಿದ್ದು, ಡೆಲ್ಲಿ 3 ಓವರ್‌ಗಳ ಮುಕ್ತಾಯಕ್ಕೆ 1 ವಿಕೆಟ್‌ ಕಳೆದುಕೊಂಡು 6 ರನ್ ಗಳಿಸಿದೆ. ನಾಯಕಿ ಜೊತೆ ಇನಿಂಗ್ಸ್‌ ಆರಂಭಿಸಿದ ಶಫಾಲಿ ವರ್ಮಾ 1 ರನ್‌ ಗಳಿಸಿ ಔಟಾಗಿದ್ದಾರೆ. ಇದೀಗ ಅಲೈಸ್ ಕ್ಯಾಪ್ಸೆ ಕ್ರೀಸ್‌ಗಿಳಿದಿದ್ದಾರೆ.

ಉಭಯ ತಂಡಗಳು ಕಳೆದ ಆವೃತ್ತಿಯ ಫೈನಲ್‌ನಲ್ಲಿ ಸೆಣಸಾಟ ನಡೆಸಿದ್ದವು. ಅನುಭವಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಮುಂಬೈ ಪ‍್ರಶಸ್ತಿಗೆ ಮುತ್ತಿಕ್ಕಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಛಲದಲ್ಲಿ ಡೆಲ್ಲಿ ಪಡೆ ಕಣಕ್ಕಿಳಿದಿದೆ.

ಹನ್ನೊಂದರ ಬಳಗ

ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹಯಲಿ ಮ್ಯಾಥ್ಯೂಸ್, ನತಾಲೀ ಶೀವರ್ ಬ್ರಂಟ್, ಯಷ್ಟಿಕಾ ಭಾಟಿಯಾ, ಅಮೆಲಿಯಾ ಕೆರ್, ಅಮನ್ಜೋತ್ ಕೌರ್, ಸಂಜೀವನ್ ಸಜನಾ, ಪೂಜಾ ವಸ್ತ್ರಕರ್, ಶಬ್ನಿಮ್ ಇಸ್ಮಾಯಿಲ್, ಕೀರ್ತನಾ ಬಾಲಕೃಷ್ಣ, ಸೈಕಾ ಇಶಾಕಿ.

ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಅಲೈಸ್ ಕ್ಯಾಪ್ಸೆ, ಜಿಮೈಮಾ ರಾಡ್ರಿಗಸ್, ಶಿಖಾ ಪಾಂಡೆ, ಮರಿಜಾನೆ ಕಾಪ್, ಅನಾಬೆಲ್ ಸದರ್ಲೆಂಡ್, ಅರುಂಧತಿ ರೆಡ್ಡಿ, ಮಿನು ಮಣಿ, ತಾನಿಯಾ ಭಾಟಿಯಾ, ರಾಧಾ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT