ಮಂಗಳವಾರ, ಅಕ್ಟೋಬರ್ 4, 2022
27 °C

ಕ್ರಿಕೆಟರ್‌ ಆರ್ಷದೀಪ್‌ ಸಿಂಗ್‌ ಬಗ್ಗೆ ತಪ್ಪು ಮಾಹಿತಿ: ವಿಕಿಪೀಡಿಯಕ್ಕೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆರ್ಷದೀಪ್‌ ಸಿಂಗ್‌ ಕುರಿತು ತಪ್ಪು ಮಾಹಿತಿ ಪ್ರಕಟಿಸಿದ ‘ವಿಕಿಪೀಡಿಯ’ವನ್ನು ಕೇಂದ್ರ ಸರ್ಕಾರ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ಆರ್ಷದೀಪ್‌ ಅವರ ಮಾಹಿತಿ ಒಳಗೊಂಡ ಪುಟವನ್ನು ಯಾರೋ ಕಿಡಿಗೇಡಿಗಳು ತಿರುಚಿದ್ದರು. ಅವರ ದೇಶ ‘ಭಾರತ’ ಎಂಬುದರ ಬದಲು ‘ಖಲಿಸ್ತಾನ’ ಎಂಬುದಾಗಿ ಬದಲಾಯಿಸಿದ್ದರು. ಅಲ್ಪ ಸಮಯದ ಬಳಿಕ ಇದನ್ನು ಸರಿಪಡಿಸಲಾಗಿತ್ತು. ಪಾಕಿಸ್ತಾನದಿಂದಲೇ ಯಾರೋ ಕಿಡಿಗೇಡಿಗಳು ಮಾಹಿತಿ ತಿರುಚಿದ್ದಾರೆ ಎನ್ನಲಾಗಿದೆ. 

‘ಈ ರೀತಿಯ ತಪ್ಪು ಮಾಹಿತಿ ನೀಡಲು ಯಾರಿಗೂ ಅವಕಾಶವಿಲ್ಲ. ಉದ್ದೇಶಪೂರ್ವಕವಾಗಿ ಪ್ರಚೋದನೆ ಉಂಟುಮಾಡುವ ಇಂತಹ ಕೃತ್ಯಗಳನ್ನು ಖಂಡಿಸುತ್ತೇವೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐ.ಟಿ. ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ‘ಟ್ವೀಟ್‌’ ಮಾಡಿದ್ದಾರೆ.

ಐ.ಟಿ ಸಚಿವಾಲಯವು ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿ ವಿಕಿಪೀಡಿಯ ಕಾರ್ಯನಿರ್ವಾಹಕರಿಗೆ ನೋಟಿಸ್‌ ಜಾರಿಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು