ಸಿರಾಜ್ ಬದಲಿ ಆಟಗಾರನನ್ನು ಪ್ರಕಟಿಸಿಲ್ಲ. ಸಿರಾಜ್ ಜೊತೆಗೆ ಟೆಸ್ಟ್ ತಂಡದಲ್ಲಿದ್ದ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಕೆ.ಎಸ್. ಭರತ್ ಮತ್ತು ನವದೀಪ್ ಸೈನಿ ಕೂಡ ತವರಿಗೆ ಮರಳಲಿದ್ದಾರೆ.
ಸಿರಾಜ್ ಅನುಪಸ್ಥಿತಿಯಲ್ಲಿ ಭಾರತ ವೇಗದ ಬೌಲಿಂಗ್ ಪಡೆಗೆ ಅನನುಭವ ಕಾಡಲಿದೆ. ಜೈದೇವ್ ಉನಾದ್ಕಟ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್ ಹಾಗೂ ಮುಕೇಶ್ ಕುಮಾರ್ ತಂಡದಲ್ಲಿದ್ದಾರೆ.
ಭಾರತ ಮತ್ತು ವಿಂಡೀಸ್ ನಡುವಣ ಮೊದಲ ಏಕದಿನ ಪಂದ್ಯ ಇಂದು ರಾತ್ರಿ 7ಕ್ಕೆ ಬಾರ್ಬಡೋಸ್‌ನಲ್ಲಿ ಆರಂಭವಾಗಲಿದೆ.