ಬುಧವಾರ, ಜುಲೈ 28, 2021
28 °C

ಮಂಗೋಲಿಯ, ತಜಿಕಿಸ್ತಾನ, ಸ್ವಿಟ್ಜರ್ಲೆಂಡ್‌ಗೆ ಐಸಿಸಿ ಮಾನ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಮಂಗೋಲಿಯ, ತಜಿಕಿಸ್ತಾನ ಮತ್ತು ಸ್ವಿಟ್ಜರ್ಲೆಂಡ್‌ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಸದಸ್ಯತ್ವ ಪಡೆದುಕೊಂಡಿವೆ. ಭಾನುವಾರ ವರ್ಚುವಲ್ ಆಗಿ ನಡೆದ 78ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಮೂರು ರಾಷ್ಟ್ರಗಳಿಗೆ ಮಾನ್ಯತೆ ನೀಡಲು ನಿರ್ಧರಿಸಲಾಗಿದೆ.

ಮಂಗೋಲಿಯ ಮತ್ತು ತಜಿಕಿಸ್ತಾನವನ್ನು ಏಷ್ಯಾ ವಲಯದಿಂದ ಕ್ರಮವಾಗಿ 22 ಮತ್ತು 23ನೇ ಸದಸ್ಯರಾಗಿ ಸೇರಿಸಲಾಯಿತು. ಸ್ವಿಟ್ಜರ್ಲೆಂಡ್‌ಗೆ ಯುರೋಪ್‌ನಿಂದ 35ನೇ ಸದಸ್ಯ ರಾಷ್ಟ್ರವಾಗಿ ಮಾನ್ಯತೆ ನೀಡಲಾಯಿತು. ಈಗ ಐಸಿಸಿಯಲ್ಲಿ 106 ಸದಸ್ಯ ಮತ್ತು 94 ಸಹಸದಸ್ಯ ರಾಷ್ಟ್ರಗಳಿವೆ.

2007ರಲ್ಲಿ ಸ್ಥಾಪನೆಯಾದ ಮಂಗೋಲಿಯನ್ ಕ್ರಿಕೆಟ್‌ ಸಂಸ್ಥೆ 2018ರಲ್ಲಿ ಅಧಿಕೃತ ರಾಷ್ಟ್ರೀಯ ಆಡಳಿತಾಧಿಕಾರಿಯನ್ನು ಹೊಂದಿತ್ತು. ಅಲ್ಲಿ ಜೂನಿಯರ್ ಕ್ರಿಕೆಟ್‌ ವೇಗವಾಗಿ ಬೆಳೆಯುತ್ತಿದ್ದು 2019ರಲ್ಲಿ ರಾಷ್ಟ್ರೀಯ ಯೂತ್ ಗೇಮ್ಸ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ. ಮಹಿಳಾ ಕ್ರಿಕೆಟ್‌ಗೆ ಹೆಚ್ಚು ಆದ್ಯತೆ ಸಿಗುತ್ತಿದೆ.

ಸ್ವಿಟ್ಜರ್ಲೆಂಡ್‌ನಲ್ಲಿ 1817ರಿಂದಲೇ ಕ್ರಿಕೆಟ್ ಚಟುವಟಿಕೆ ಆರಂಭಗೊಂಡಿತ್ತು. 2014ರಲ್ಲಿ ಕ್ರಿಕೆಟ್ ಸಂಸ್ಥೆಯನ್ನು ಉದ್ಘಾಟಿಸಲಾಗಿತ್ತು. ನಂತರ ಕ್ರಿಕೆಟ್ ಚಟುವಟಿಕೆ ಸಕ್ರಿಯವಾಗಿ ನಡೆದಿತ್ತು. ದೇಶದಲ್ಲಿ ಈಗ 33 ಸಕ್ರಿಯ ಕ್ಲಬ್‌ಗಳಿದ್ದು ಮೂರು ದೇಶಿ ಟೂರ್ನಿಗಳನ್ನು ಆಯೋಜಿಸಲಾಗುತ್ತಿದೆ. ಅನೇಕ ಜೂನಿಯರ್ ಟೂರ್ನಿಗಳು ಕೂಡ ನಡೆಯುತ್ತಿವೆ.

ತಜಿಕಿಸ್ತಾನ ಕ್ರಿಕೆಟ್ ಫೆಡರೇಷನ್ 2011ರಲ್ಲಿ ಆರಂಭಗೊಂಡಿತ್ತು. ಪುರುಷರ 22 ತಂಡಗಳು ಮತ್ತು ಮಹಿಳೆಯರ 15 ತಂಡಗಳು ದೇಶದಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು