ಲಂಡನ್: ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಸೇರಿದಂತೆ ಏಳು ಮಂದಿ ಕ್ರಿಕೆಟಿಗರು 2025ರ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಸೋಮವಾರ ಪಾತ್ರರಾಗಿದ್ದಾರೆ. ಇವರಲ್ಲಿ ಇಬ್ಬರು ಆಟಗಾರ್ತಿಯರು ಒಳಗೊಂಡಿದ್ದಾರೆ.

ಧೋನಿ ಅವರೊಂದಿಗೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಮ್ಯಾಥ್ಯೂ ಹೇಡನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಹಾಶಿಮ್ ಆಮ್ಲ ಮತ್ತು ನ್ಯೂಜಿಲೆಂಡ್ನ ಮಾಜಿ ನಾಯಕ ಡೇನಿಯಲ್ ವೆಟೋರಿ ಅವರು ಈ ಐವರು ಆಟಗಾರರು.

ಇಂಗ್ಲೆಂಡ್ನ ಬ್ಯಾಟರ್– ವಿಕೆಟ್ ಕೀಪರ್ ಸಾರಾ ಟೇಲರ್ ಮತ್ತು ಪಾಕಿಸ್ತಾನ ತಂಡದ ಮಾಜಿ ನಾಯಕಿ ಸನಾ ಮಿರ್ ಅವರು ಈ ಗೌರವಕ್ಕೆ ಪಾತ್ರರಾದ ಆಟಗಾರ್ತಿಯರು.

‘ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 17,266 ರನ್ ಕಲೆಹಾಕಿದ್ದಾರೆ. ವಿಕೆಟ್ ಹಿಂದೆ 829 ಕ್ಯಾಚ್ ಪಡೆದಿದ್ದಾರೆ. ಮೂರೂ ಮಾದರಿಗಳಲ್ಲಿ 538 ಪಂದ್ಯಗಳನ್ನು (90 ಟೆಸ್ಟ್, 350 ಏಕದಿನ, 98 ಟಿ20 ಪಂದ್ಯ) ಆಡಿದ್ದಾರೆ. ಇದು ಅಂಕಿಗಳಷ್ಟೇ ಅಲ್ಲ, ಅವರ ಅಸಾಧಾರಣ ಸ್ಥಿರತೆ, ಫಿಟ್ನೆಸ್, ದೀರ್ಘ ಕಾಲ ಆಡುವ ಸಾಮರ್ಥ್ಯವನ್ನೂ ಪ್ರತಿಬಿಂಬಿಸುತ್ತದೆ ’ ಎಂದು ಐಸಿಸಿ ಬಣ್ಣಿಸಿದೆ.

2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಅವರು, 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡವನ್ನೂ ಮುನ್ನಡೆಸಿದ್ದರು.

‘ಐಸಿಸಿ ಹಾಲ್ಆಫ್ ಫೇಮ್ ಗೌರವಕ್ಕೆ ಹೆಸರಿಸಿರುವುದು ನನ್ನ ಪಾಲಿಗೊದಗಿದ ಗೌರವ’ ಎಂದು 43 ವರ್ಷ ವಯಸ್ಸಿನ ಧೋನಿ ಐಸಿಸಿಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾಲ್ ಆಫ್ ಫೇಮ್ಗೆ ಸೇರ್ಪಡೆ ಕಾರ್ಯಕ್ರಮ ಲಂಡನ್ ಅಬ್ಬೇ ರೋಡ್ ಸ್ಟುಡಿಯೊದಲ್ಲಿ ನಡೆಯಿತು.

ಹಾಶಿಂ ಆಮ್ಲ ಅವರು ದಕ್ಷಿಣ ಆಫ್ರಿಕಾ ಪರ ಟೆಸ್ಟ್ನಲ್ಲಿ ತ್ರಿಶತಕ ಬಾರಿಸಿದ ಮೊದಲ ಆಟಗಾರ. ಅವರು ಓವಲ್ನಲ್ಲಿ 2012ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 311 ರನ್ ಬಾರಿಸಿದ್ದರು.

ಕೇವಲ 22ನೇ ವಯಸ್ಸಿನಲ್ಲಿ ನಾಯಕರಾದ ಗ್ರೇಮ್ ಸ್ಮಿತ್ 109 ಟೆಸ್ಟ್ಗಳಲ್ಲಿ ತಂಡವನ್ನು ಮುನ್ನಡೆಸಿದ್ದು ವಿಶ್ವ ದಾಖಲೆ. ಈ ಆರಂಭ ಆಟಗಾರನನ್ನು ಬಿಟ್ಟರೆ ಬೇರಾರೂ 100ಕ್ಕಿಂತ ಹೆಚ್ಚು ಪಂದ್ಯಗಳಿಗೆ ನಾಯಕರಾಗಿಲ್ಲ.

ಆರಂಭ ಆಟಗಾರ ಹೇಡನ್ ಟೆಸ್ಟ್ಗಳಲ್ಲಿ 50ಕ್ಕಿಂತ ಹೆಚ್ಚು ಸರಾಸರಿಯ ರನ್ಗಳಿಸಿದ್ದು 30 ಶತಕಗಳನ್ನು ಬಾರಿಸಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಆಗಿರುವ ಎಡಗೈ ಸ್ಪಿನ್ನರ್ ವೆಟೋರಿ, ಟೆಸ್ಟ್ಗಳಲ್ಲಿ 4000ಕ್ಕಿಂತ ಹೆಚ್ಚು ರನ್ ಮತ್ತು 300 ವಿಕೆಟ್ಗಳನ್ನು ಪಡೆದಿರುವ ಕೇವಲ ಮೂವರು ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ವಿಕೆಟ್ ಕೀಪರ್ ಸಾರಾ ಅವರು ಇಂಗ್ಲೆಂಡ್ ತಂಡ 2017ರ ಮಹಿಳಾ ಏಕದಿನ ವಿಶ್ವಕಪ್ ಸೇರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆಲ್ಲಲು ನೆರವಾಗಿದ್ದಾರೆ.

ಆಫ್ ಸ್ಪಿನ್ನರ್ ಸನಾ ಮಿರ್, ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡ ಪಾಕಿಸ್ತಾನ ಮೊದಲ ಆಟಗಾರ್ತಿ. ಏಕದಿನ ಪಂದ್ಯಗಳಲ್ಲಿ 151 ವಿಕೆಟ್ ಕಬಳಿಸಿದ್ದಾರೆ.

2025ರ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದವರು..

ಮಹೇಂದ್ರ ಸಿಂಗ್ ಧೋನಿ

ಗ್ರೇಮ್ ಸ್ಮಿತ್ –ದಕ್ಷಿಣ ಆಫ್ರಿಕಾ

ಹಾಶಿಮ್ ಆಮ್ಲಾ–ದಕ್ಷಿಣ ಆಫ್ರಿಕಾ

ಮ್ಯಾಥ್ಯೂ ಹೇಡನ್–ಆಸ್ಟ್ರೇಲಿಯಾ

ಡೇನಿಯಲ್ ವೆಟ್ಟೋರಿ– ನ್ಯೂಜಿಲೆಂಡ್

ಸಾರಾ ಟೇಲರ್–ಇಂಗ್ಲೆಂಡ್

ಸನಾ ಮಿರ್ –ಪಾಕಿಸ್ತಾನ

.ಕಮಲಾದೇವಿ ಅರವಿಂದನ್ಗೆ ಸಿಂಗಪುರ ಹಾಲ್ ಆಫ್ ಫೇಮ್ ಗೌರವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.