ಗುರುವಾರ , ಮೇ 13, 2021
16 °C

ಐಪಿಎಲ್ ಇತಿಹಾಸದಲ್ಲೇ ನಾರಾಯಣ್ ದಾಳಿಯಲ್ಲಿ ಮೊದಲ ಬೌಂಡರಿ ಸಿಡಿಸಿದ ಧೋನಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿ ಇತಿಹಾಸದಲ್ಲೇ ಕೋಲ್ಕತ್ತ ನೈಟ್ ರೈಡರ್ಸ್ ಸ್ಪಿನ್ನರ್ ಸುನಿಲ್ ನಾರಾಯಣ್ ದಾಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಚೊಚ್ಚಲ ಬೌಂಡರಿ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧೋನಿ ಇದಕ್ಕಾಗಿ ಒಂಬತ್ತು ವರ್ಷಗಳಷ್ಟು ಕಾಲ ಕಾಯಬೇಕಾಯಿತು. ಐಪಿಎಲ್‌ನಲ್ಲಿ ನಾರಾಯಣ್ ವಿರುದ್ಧ ಧೋನಿ ಉತ್ತಮ ದಾಖಲೆಯನ್ನು ಹೊಂದಿಲ್ಲ. ಅಂಕಿಅಂಶಗಳೇ ಇದನ್ನು ಸಾರುತ್ತಿವೆ. ಅಲ್ಲದೆ ವೆಸ್ಟ್‌ಇಂಡೀಸ್‌ನ ಸ್ಟಾರ್ ಸ್ಪಿನ್ನರ್ ವಿರುದ್ಧ ಚೊಚ್ಚಲ ಬೌಂಡರಿ ಸಿಡಿಸಲು 65 ಎಸೆತಗಳನ್ನು ಎದುರಿಸಿದ್ದಾರೆ.

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸುನಿಲ್ ನಾರಾಯಣ್ ಎಸೆದ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಧೋನಿ ಬೌಂಡರಿ ಸಿಡಿಸಿದ್ದರು.

ಇದನ್ನೂ ಓದಿ: 

2012ನೇ ಇಸವಿಯಿಂದಲೂ ನಾರಾಯಣ್ ಸವಾಲನ್ನು ಧೋನಿ ಎದುರಿಸುತ್ತಿದ್ದಾರೆ. ಇದುವರೆಗೆ 69 ಎಸೆತಗಳನ್ನು ಎದುರಿಸಿದ್ದು, 39 ರನ್ ಮಾತ್ರ ಗಳಿಸಲಿದ್ದಾರೆ.

15 ಇನ್ನಿಂಗ್ಸ್‌ಗಳಲ್ಲಿ ಒಂದು ಬಾರಿ ಮಾತ್ರ ನಾರಾಯಣ್‌ಗೆ ವಿಕೆಟ್ ಒಪ್ಪಿಸಿದರೂ 56ರ ಸ್ಟ್ರೇಕ್‌ರೇಟ್ ಕಾಪಾಡಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಧೋನಿ vs ನಾರಾಯಣ್ (ಅಂಕಿಅಂಶ) ಇಂತಿದೆ:
ಇನ್ನಿಂಗ್ಸ್: 15
ರನ್: 39
ಎಸೆತ: 69
ಸ್ಟ್ರೇಕ್‌ರೇಟ್: 56
ಬೌಂಡರಿ: 0
ಔಟ್: 1

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು