ಹಾರ್ದಿಕ್ –ಧೋನಿ ಭೇಟಿ: ಟೀಂ ಇಂಡಿಯಾ ಜತೆ ಸಮಾಲೋಚನೆ ನಡೆಸಿದ ಮಾಜಿ ಕ್ಯಾಪ್ಟನ್

ರಾಂಚಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಭಾರತ ತಂಡದ ಆಟಗಾರರನ್ನು ಭೇಟಿಯಾದರು.
ಧೋನಿಯ ತವರೂರಾಗಿರುವ ರಾಂಚಿಯಲ್ಲಿ ಶುಕ್ರವಾರ ನಡೆಯಲಿರುವ ಟಿ20 ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.
ಗುರುವಾರ ತಂಡದ ಅಭ್ಯಾಸ ನಡೆದ ಸಂದರ್ಭದಲ್ಲಿ ಧೋನಿ ಭೇಟಿ ನೀಡಿದರು. ಅವರು ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಕೆಲಹೊತ್ತು ಮಾತನಾಡಿದರು. ನಂತರ ವಿಕೆಟ್‌ಕೀಪರ್ –ಬ್ಯಾಟರ್ ಇಶಾನ್ ಕಿಶನ್, ಆರಂಭಿಕ ಬ್ಯಾಟರ್ ಶುಭಮನ್ ಗಿಲ್, ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಬಹಳ ಹೊತ್ತು ಸಲಹೆಗಳನ್ನು ನೀಡಿದರು. ನೆರವು ಸಿಬ್ಬಂದಿಯನ್ನೂ ಭೇಟಿಯಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.