ಬುಧವಾರ, ಸೆಪ್ಟೆಂಬರ್ 22, 2021
24 °C

ಐಪಿಎಲ್: ಮುಂಬೈ ಇಂಡಿಯನ್ಸ್‌ ತಂಡಕ್ಕೆ ಈ ಬಾರಿ ಲಸಿತ್ ಮಾಲಿಂಗ ಬದಲು ಪ್ಯಾಟಿನ್ಸನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಬುದಾಭಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಈ ಸಲ ವೇಗಿ ಲಸಿತ್ ಮಾಲಿಂಗ ಅವರು ಲಭ್ಯರಿಲ್ಲ.

ಅವರ ಬದಲಿಗೆ ಆಸ್ಟ್ರೇಲಿಯಾದ ವೇಗಿ ಜೇಮ್ಸ್‌ ಪ್ಯಾಟಿನ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. 

‘ವೈಯಕ್ತಿಕ ಕಾರಣಗಳಿಂದಾಗಿ ಲಸಿತ್ ಈ ಬಾರಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ಧಾರೆ. ಅವರು ತಮ್ಮ ಕುಟುಂಬದೊಂದಿಗೆ ನೆಲೆಸಲು ತವರೂರಿಗೆ ತೆರಳಿದ್ದಾರೆ’ ಎಂದು ಮುಂಬೈ ತಂಡದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಅಬುದಾಭಿಯಲ್ಲಿರುವ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ಯಾಟಿನ್ಸನ್ ಇದೇ ವಾರಾಂತ್ಯದಲ್ಲಿ ಸೇರಿಕೊಳ್ಳಲಿದ್ದಾರೆ.

‘ಲಸಿತ್ ಅವರು ಮುಂಬೈ ಇಂಡಿಯನ್ಸ್  ತಂಡದ ಆಧಾರಸ್ತಂಭ. ಅವರೊಬ್ಬ ಶ್ರೇಷ್ಠ ಬೌಲರ್. ನಮ್ಮ ತಂಡದ ಹಲವಾರು ಮಹತ್ವದ ಗೆಲುವುಗಳ ರೂವಾರಿ ಅವರು. ಲಸಿತ್ ಅವರಿಲ್ಲದೇ ಕಣಕ್ಕಿಳಿಯುವುದು ಕಷ್ಟ. ಆದರೆ, ಅವರ ವೈಯಕ್ತಿಕ ಕಾರಣಗಳನ್ನು ಗೌರವಿಸುತ್ತೇವೆ. ಪ್ಯಾಟಿನ್ಸನ್‌ ಕೂಡ ಉತ್ತಮ ಬೌಲರ್ ಲಸಿತ್ ಸ್ಥಾನವನ್ನು ತುಂಬುವ ವಿಶ್ವಾಸವಿದೆ’ ಎಂದು ತಂಡದ  ಮಾಲೀಕ ಆಕಾಶ್ ಅಂಬಾನಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು