ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಳಿ ವಿಜಯ್ ಶತಕ: ತಮಿಳುನಾಡಿಗೆ ಜಯ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ
Last Updated 4 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮುರಳಿ ವಿಜಯ್ ಅವರ ಶತಕದ ಬಲದಿಂದ ತಮಿಳುನಾಡು ತಂಡವು ಜೈಪುರದಲ್ಲಿ ನಡೆಯತ್ತಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಎದುರು ಜಯಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು–ಕಾಶ್ಮೀರ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 238 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ತಮಿಳುನಾಡು ತಂಡವು ಮುರಳಿ ಶತಕ (117 ರನ್) ಮತ್ತು ಬಾಬಾ ಅಪರಾಜಿತ್ (ಔಟಾಗದೆ 86) ಅವರ ಆಟದಿಂದ 48 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 239 ರನ್‌ ಗಳಿಸಿ ಗೆದ್ದಿತು.

ಸಂಕ್ಷಿಪ್ತ ಸ್ಕೋರು‌:

ಜೈಪುರ: ಸಿ ಗುಂಪು: ಜಮ್ಮು ಮತ್ತು ಕಾಶ್ಮೀರ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 238 (ಖಮ್ರನ್ ಇಕ್ಬಾಲ್ 67, ಶುಭಂ ಪಂಡಿತ್ 66, ಅಬ್ದುಲ್ ಸಮದ್ 50, ರವಿಶ್ರೀನಿವಾಸನ್ ಸಾಯಿಕಿಶೋರ್ 17ಕ್ಕೆ2, ಟಿ. ನಟರಾಜನ್ 45ಕ್ಕೆ2) ತಮಿಳುನಾಡು 48 ಓವರ್‌ಗಳಲ್ಲಿ 2ಕ್ಕೆ239 (ಅಭಿನವ್ ಮುಕುಂದ್ 21, ಮುರಳಿ ವಿಜಯ್ 117, ಬಾಬಾ ಅಪರಾಜಿತ್ ಔಟಾಗದೆ 86, ರಾಮ್ ದಯಾಳ 41ಕ್ಕೆ1, ಪರ್ವೇಜ್ ರಸೂಲ್ 39ಕ್ಕೆ1) ಫಲಿತಾಂಶ ತಮಿಳುನಾಡು ತಂಡಕ್ಕೆ 8 ವಿಕೆಟ್‌ಗಳ ಜಯ.

ತ್ರಿಪುರ: 50 ಓವರ್‌ಗಳಲ್ಲಿ 8ಕ್ಕೆ285 (ಬಿಶಾಲ್ ಘೋಷ್ 128, ತನ್ಮಯ್ ಮಿಶ್ರಾ 58, ಅನಿಕೇತ್ ಚೌಧರಿ 54ಕ್ಕೆ2, ರವಿ ಬಿಷ್ಣೋಯ್ 47ಕ್ಕೆ2, ರಾಹುಲ್ ಚಾಹರ್ 64ಕ್ಕೆ2), ರಾಜಸ್ಥಾನ: 47 ಓವರ್‌ಗಳಲ್ಲಿ 238 (ಅಮಿತ್‌ಕುಮಾರ್ ಗೌತಮ್ 23, ಚೇತನ್ ಬಿಷ್ಠ್ 29, ಮಹಿಪಾಲ್ ಲೊಮ್ರೊರ್ 71, ಅರ್ಜಿತ್ ಗುಪ್ತಾ 25, ಅಶೋಕ್ ಮನೇರಿಯಾ 38, ಮಣಿಶಂಕರ್ ಮುರಾಸಿಂಗ್ 38ಕ್ಕೆ2, ಅಜಯ್ ಸರ್ಕಾರ್ 58ಕ್ಕೆ3, ಹರ್ಮೀತ್ ಸಿಂಗ್ 50ಕ್ಕೆ2, ನೀಲಾಂಬುಜ್ ವತ್ಸ್ 49ಕ್ಕೆ2) ಫಲಿತಾಂಶ: ತ್ರಿಪುರ ತಂಡಕ್ಕೆ 47 ರನ್‌ಗಳ ಜಯ. ತ್ರಿಪುರ ತಂಕಕ್ಕೆ 47 ರನ್‌ಗಳಿಂದ ಜಯ.

ಮಧ್ಯಪ್ರದೇಶ: 50 ಓವರ್‌ಗಳಲ್ಲಿ 7ಕ್ಕೆ282 (ಮುಖುಲ್ ರಾಘವ್ 22, ನಮನ್ ಓಜಾ 130, ಆನಂದ್ ಬೈಸ್ 61, ಯಶ್ ದುಬೆ 29, ದಿವೇಶ್ ಪಠಾಣಿಯಾ 50ಕ್ಕೆ4, ಪಾಲ್ ರಾಜ್ ಬಹಾದ್ದೂರ್ 58ಕ್ಕೆ2, ಪುಳಕಿತ್ ನಾರಂಗ್ 55ಕ್ಕೆ1), ಸರ್ವಿಸಸ್: 47.1 ಓವರ್‌ಗಳಲ್ಲಿ 3ಕ್ಕೆ 283 (ರವಿ ಚವ್ಹಾಣ್ 118, ಗೆಹ್ಲೋಟ್ ರಾಹುಲ್ ಸಿಂಗ್ 109, ರಜತ್ ಪಲಿವಾಲ 23, ಈಶ್ವರ್‍ ಪಾಂಡೆ 43ಕ್ಕೆ1, ಆವೇಶ್ ಖಾನ್44ಕ್ಕೆ1, ಸಾರಾಂಶ್ ಜೈನ್ 47ಕ್ಕೆ1) ಫಲಿತಾಂಶ: ಸರ್ವಿಸಸ್ ತಂಡಕ್ಕೆ 7 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT