ಮಂಗಳವಾರ, ಜೂನ್ 28, 2022
21 °C

#ನಮ್ಮRCB: ಬೆಂಗಳೂರು ತಂಡವನ್ನು ಬೆಂಬಲಿಸಿ ಟ್ವಿಟರ್‌ನಲ್ಲಿ ಟ್ರೆಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಪಿಎಲ್‌ 2022ರ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಕಣಕ್ಕಿಳಿದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಬೆಂಬಲಿಸಿ ಅಭಿಮಾನಿಗಳು ಟ್ವಿಟರ್‌ನಲ್ಲಿ #ನಮ್ಮRCB ಹ್ಯಾಷ್‌ಟ್ಯಾಗ್‌ ಸೃಷ್ಟಿಮಾಡಿ ಟ್ರೆಂಡಿಂಗ್‌ ಮಾಡಿದ್ದಾರೆ.

'#ನಮ್ಮRCB ಪಡೆ ಸಿದ್ಧವಾಗಿದೆ. ಇಂದಿನ ಎರಡನೇ ಕ್ವಾಲಿಫೈಯರ್‌ #Royal ಕಾಳಗಕ್ಕೆ' ಎಂದು ಕೆಜಿಎಫ್‌ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ ಮಾಡಿದೆ. 'ಫಲಕ್‌ ಕ ದಸ್ತರ್‌ ಖುದ ಕ ಹುಕುಮ್‌, ಔರ್‌ ಏಕ್‌ ಸುಲ್ತಾನ್‌ ಕಿ ದುವಾ ಹೈ' ಎಂದು ಪೋಸ್ಟರ್‌ ಒಂದನ್ನು ಸೃಷ್ಟಿಸಿ ಹುರಿದಂಬಿಸಿದೆ.

ಮಾನ್‌ಸ್ಟರ್‌ ವಿನ್‌, ತೂಫಾನ್‌ ಪ್ಲೇ ಎಂದು ಕೆಜಿಎಫ್‌ ಸಿನಿಮಾ ಮಾದರಿ ಘರ್ಜನೆಯ ಘೋಷವಾಕ್ಯಗಳನ್ನು ಹೊಂಬಾಳೆ ಫಿಲ್ಮ್ಸ್‌ ಪೋಸ್ಟರ್‌ನಲ್ಲಿ ಬರೆದಿದೆ. ಹೆಚ್ಚಿನ ಸಂಖ್ಯೆಯ ಆರ್‌ಸಿಬಿ ಅಭಿಮಾನಿಗಳು #ನಮ್ಮRCB  ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ಮಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು