ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವೀಸ್ ಪ್ರವಾಸ ಮುಗಿಯುವುದರೊಳಗೆ ಹೊಸ ಆಯ್ಕೆದಾರರ ನೇಮಕವಾಗಲಿದೆ: ಸಿಎಸಿ

Last Updated 17 ಫೆಬ್ರುವರಿ 2020, 13:09 IST
ಅಕ್ಷರ ಗಾತ್ರ

ನವದೆಹಲಿ:ಭಾರತ ಕ್ರಿಕೆಟ್‌ ತಂಡವು ಸದ್ಯ ಕೈಗೊಂಡಿರುವ ನ್ಯೂಜಿಲೆಂಡ್‌ ಪ್ರವಾಸ ಮುಗಿಯುವುದರೊಳಗೆ ಆಯ್ಕೆ ಸಮಿತಿಗೆಇಬ್ಬರು ಹೊಸ ಸದಸ್ಯರ ನೇಮಕವಾಗಲಿದೆ ಎಂದು ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಮದನ್‌ ಲಾಲ್‌ ಹೇಳಿದ್ದಾರೆ.

ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಹಾಗೂ ಸದಸ್ಯ ಗಗನ್‌ ಕೋಡಾ ಅವರ ಅವಧಿ ಶೀಘ್ರದಲ್ಲೇ ಮುಕ್ತಾಯವಾಗಲಿದ್ದು, ಅವರ ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಮಾತನಾಡಿರುವ ಮದನ್‌ ಲಾಲ್‌, ‘ನಾವು ಈಗಾಗಲೇ 44 ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ನ್ಯೂಜಿಲೆಂಡ್‌ ಪ್ರವಾಸ ಮುಗಿಯುವುದರೊಳಗೆ ಇಬ್ಬರು ಆಯ್ಕೆದಾರರನ್ನು ನೇಮಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಭಾರತ ಈಗಾಗಲೇ ಐದು ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಿದೆ. ಎರಡು ಪಂದ್ಯಗಳ ಟೆಸ್ಟ್‌ ಸರಣಿ ಇದೇ ತಿಂಗಳ 21ರಿಂದ ಆರಂಭವಾಗಲಿದ್ದು, ಮಾರ್ಚ್‌ 5ಕ್ಕೆ ಮುಗಿಯಲಿದೆ.

‘ಎಲ್ಲ ಅರ್ಜಿಗಳನ್ನು ಪರಿಗಣಿಸಿ ಎಷ್ಟು ಜನರನ್ನು ಸಂದರ್ಶನಕ್ಕೆ ಆಹ್ವಾನಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದೂ ಹೇಳಿದ್ದಾರೆ.ಮಾಜಿ ಕ್ರಿಕೆಟಿಗ ರುದ್ರ ಪ್ರತಾಪ್‌ ಸಿಂಗ್‌ ಹಾಗು ಸುಲಕ್ಷಣಾ ನಾಯ್ಕ್‌ ಸಲಹಾ ಸಮಿತಿಯಲ್ಲಿರುವ ಇನ್ನಿಬ್ಬರು ಸದಸ್ಯರಾಗಿದ್ದಾರೆ.

ಮಾಜಿ ಕ್ರಿಕೆಟಿಗರಾದ ಅಜಿತ್‌ ಅಗರ್ಕರ್‌, ವೆಂಕಟೇಶ್‌ ಪ್ರಸಾದ್‌,ನಯನ್‌ ಮೋಂಗಿಯಾ, ಲಕ್ಷ್ಮಣ್‌ ಶಿವರಾಮಕೃಷ್ಣನ್‌,ಅಮೇ ಖುರಾಸಿಯಾ ಸೇರಿದಂತೆ ಮತ್ತಿತರ ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿರುವ ಇತರ ಸದಸ್ಯರಾದ ದೇವಾಂಗ್‌ ಗಾಂಧಿ, ಜತಿನ್‌ ಪರಾಂಜಪೆ ಹಾಗೂ ಸರಣ್‌ದೀಪ್‌ ಅವರ ಅವಧಿ ಇನ್ನೂ ಒಂದು ವರ್ಷವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT