ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಏಕದಿನ ಕ್ರಿಕೆಟ್‌ ಪಂದ್ಯ: ಕುಲದೀಪ್‌ ಸ್ಪಿನ್‌ ದಾಳಿಗೆ ಕಿವೀಸ್‌ ತತ್ತರ 

Last Updated 23 ಜನವರಿ 2019, 5:57 IST
ಅಕ್ಷರ ಗಾತ್ರ

ನೇಪಿಯರ್: ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ.

ವೇಗಿ ಮಹಮ್ಮದ್‌ ಶಮಿ ಹಾಗೂ ಕುಲದೀಪ್‌ ಯಾದವ್‌ ಅವರ ಸ್ಪಿನ್‌ ದಾಳಿಗೆ ತತ್ತರಿಸಿದ ಕೇನ್‌ ಪಡೆ 38 ಓವರ್‌ಗಳಲ್ಲಿ 157 ರನ್‌ ಗಳಿಸಿ ಆಲೌಟ್‌ ಆಗಿದೆ.

ಭಾರತದ ವಿರುದ್ಧ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಪಡೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ನ್ಯೂಜಿಲೆಂಡ್‌ ಪರ: ಮಾರ್ಟಿನ್ ಗಪ್ಟಿಲ್ 5, ಕಾಲಿನ್ ಮನ್ರೊ 8, ಕೇನ್ ವಿಲಿಯಮ್ಸನ್ 64, ರಾಸ್ ಟೇಲರ್ 24, ಟಾಮ್ ಲಥಾಮ್ 11, ಹೆನ್ರಿ ನಿಕೊಲ್ಸ್ 12, ಮಿಚೆಲ್ ಸ್ಯಾಂಟನರ್ 14, ಡಫ್ ಬ್ರೇಸ್‌ವೆಲ್ 7, ಲಾಕಿ ಫರ್ಗ್ಯುಸನ್ 00, ಟ್ರೆಂಟ್ ಬೌಲ್ಟ್ 01, ಟಿಮ್ ಸೌಧಿ ಅಜೇಯ 9 ರನ್‌ ಗಳಿಸಿದ್ದಾರೆ.

ಭಾರತದ ಪರ: ಕುಲದೀಪ್‌ ಯಾದವ್‌ 4, ಮೊಹಮ್ಮದ್‌ ಶಮಿ 3, ಯಜುವೇಂದ್ರ ಚಾಹಲ್‌ 2, ಕೇದಾರ್‌ ಜಾಧವ್‌ 1 ವಿಕೆಟ್‌ ಪಡೆದಿದ್ದಾರೆ.

ಸದ್ಯ 158 ರನ್‌ ಗೆಲುವಿನ ಗುರಿ ಬೆನ್ನತ್ತಿರುವ ಭಾರತ ಭೋಜನ ವಿರಾಮದ ವೇಳೆಗೆ 9 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 41 ರನ್‌ ಗಳಿಸಿದೆ(ರೋಹಿತ್‌ ಶರ್ಮಾ 11*, ಶಿಖರ್‌ ಧವನ್‌ 29*).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT