ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವಿಕೆಟ್ ಪಡೆದ ಪಂದ್ಯದಲ್ಲಿ ಧರಿಸಿದ್ದ ‘ಟಿ–ಶರ್ಟ್’ ಹರಾಜಿಗಿಟ್ಟ ಎಜಾಜ್

ನ್ಯೂಜಿಲೆಂಡ್‌ನ ಮಕ್ಕಳ ರಾಷ್ಟ್ರೀಯ ಆಸ್ಪತ್ರೆ ರೇಡಿಯಾಲಜಿ ವಿಭಾಗದ ಪ್ಲೇ ಥೆರಪಿಗಾಗಿ ಹಣ ಸಂಗ್ರಹ
Last Updated 6 ಮೇ 2022, 12:37 IST
ಅಕ್ಷರ ಗಾತ್ರ

ವೆಲಿಂಗ್ಟನ್: ಟೆಸ್ಟ್ ಕ್ರಿಕೆಟ್ ಪಂದ್ಯದ ಇನಿಂಗ್ಸ್‌ವೊಂದರ ಎಲ್ಲ 10 ವಿಕೆಟ್ ಉರುಳಿಸಿದ ನ್ಯೂಜಿಲೆಂಡ್‌ನ ಎಜಾಜ್ ಪಟೇಲ್, ಅಪೂರ್ವ ಸಾಧನೆ ಮಾಡಿದ ಪಂದ್ಯದಲ್ಲಿ ಧರಿಸಿದ್ದ ಟಿ–ಶರ್ಟ್ ಹರಾಜು ಮಾಡಲಿದ್ದಾರೆ. ಆಕ್ಲೆಂಡ್‌ನ ಆಸ್ಪತ್ರೆಯೊಂದಕ್ಕಾಗಿ ಹಣ ಸಂಗ್ರಹಿಸುವುದಕ್ಕಾಗಿ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.

33 ವರ್ಷದ ಎಡಗೈ ಸ್ಪಿನ್ನರ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಎದುರಿನ ಪಂದ್ಯದಲ್ಲಿ ಅಪರೂಪದ ಸಾಧನೆ ಮಾಡಿದ್ದರು. ಇನಿಂಗ್ಸ್‌ನ ಎಲ್ಲ ವಿಕೆಟ್ ಗಳಿಸಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದರು. ಇಂಗ್ಲೆಂಡ್‌ನ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ಈ ಹಿಂದೆ ಈ ಸಾಧನೆ ಮಾಡಿದ್ದರು.

ನ್ಯೂಜಿಲೆಂಡ್‌ನ ಮಕ್ಕಳ ರಾಷ್ಟ್ರೀಯ ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ಪ್ಲೇ ಥೆರಪಿಯಲ್ಲಿ ತೊಡಗಿಸಿಕೊಂಡಿರುವವರಿಗಾಗಿ ಹಣ ಸಂಗ್ರಹ ಮಾಡುವುದಾಗಿ ಎಜಾಜ್ ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಹರಾಜು ಮಾಡುವ ಟಿ–ಶರ್ಟ್‌ ಮೇಲೆ ಭಾರತ ಪ್ರವಾಸದಲ್ಲಿದ್ದ ತಂಡದ ಎಲ್ಲ ಸದಸ್ಯರು ಸಹಿ ಮಾಡಿದ್ದಾರೆ. ಮುಂಬೈ ಟೆಸ್ಟ್ ನಂತರ ನಡೆದ ಸರಣಿಗಳಲ್ಲಿ ಎಜಾಜ್ ಪಟೇಲ್ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಗಳಿಸಿರಲಿಲ್ಲ. ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಗೆ ಪ್ರಕಟಿಸಿರುವ ತಂಡದಲ್ಲಿ ಅವರ ಹೆಸರು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT