ಕ್ರಿಕೆಟ್‌: ರಾವಲ್‌, ಟಾಮ್‌ ಶತಕ

ಶನಿವಾರ, ಮಾರ್ಚ್ 23, 2019
28 °C

ಕ್ರಿಕೆಟ್‌: ರಾವಲ್‌, ಟಾಮ್‌ ಶತಕ

Published:
Updated:
Prajavani

ಹ್ಯಾಮಿಲ್ಟನ್‌: ಆರಂಭಿಕರಾದ ಜೀತ್ ರಾವಲ್‌ (132; 220ಎ, 19ಬೌಂ, 1ಸಿ) ಮತ್ತು ಟಾಮ್‌ ಲಾಥಮ್‌ (161; 248ಎ, 17ಬೌಂ, 3ಸಿ) ಅವರ ಅಮೋಘ ಶತಕಗಳ ಬಲದಿಂದ ನ್ಯೂಜಿಲೆಂಡ್‌ ತಂಡ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮುನ್ನಡೆಯತ್ತ ಹೆಜ್ಜೆ ಇಟ್ಟಿದೆ.

ಸೆಡನ್‌ ಪಾರ್ಕ್‌ ಅಂಗಳದಲ್ಲಿ ವಿಕೆಟ್‌ ನಷ್ಟವಿಲ್ಲದೆ 86ರನ್‌ಗಳಿಂದ ಶುಕ್ರವಾರ ಆಟ ಮುಂದುವರಿಸಿದ ಕಿವೀಸ್‌ ನಾಡಿನ ತಂಡ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 118 ಓವರ್‌ಗಳಲ್ಲಿ 4 ವಿಕೆಟ್‌ಗೆ 451ರನ್‌ ದಾಖಲಿಸಿದೆ.

ಮೊದಲ ದಿನದಾಟದಲ್ಲಿ ಎಚ್ಚರಿಕೆಯ ಇನಿಂಗ್ಸ್‌ ಕಟ್ಟಿದ್ದ ರಾವಲ್‌ ಮತ್ತು ಲಾಥಮ್‌ ಎರಡನೇ ದಿನವೂ ಬಾಂಗ್ಲಾ ಬೌಲರ್‌ಗಳನ್ನು ಕಾಡಿದರು. ಇವರು ಮೊದಲ ವಿಕೆಟ್‌ಗೆ 254ರನ್‌ ಸೇರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನ್ಯೂಜಿಲೆಂಡ್‌ನ ಜೋಡಿ ಮೊದಲ ವಿಕೆಟ್‌ಗೆ ದಾಖಲಿಸಿದ ಮೂರನೇ ಅತಿ ದೊಡ್ಡ ಮೊತ್ತ ಇದಾಗಿದೆ.

ಈ ಜೋಡಿ ಔಟಾದ ನಂತರ ನಾಯಕ ಕೇನ್‌ ವಿಲಿಯಮ್ಸನ್‌ (ಬ್ಯಾಟಿಂಗ್‌ 93; 132ಎ, 9ಬೌಂ) ಮತ್ತು ಹೆನ್ರಿ ನಿಕೋಲ್ಸ್‌ (53; 81ಎ, 7ಬೌಂ) ಉತ್ತಮ ಜೊತೆಯಾಟ ಆಡಿ ತಂಡದ ಮುನ್ನಡೆ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ: ಮೊದಲ ಇನಿಂಗ್ಸ್‌, 59.2 ಓವರ್‌ಗಳಲ್ಲಿ 234 (ತಮಿಮ್‌ ಇಕ್ಬಾಲ್‌ 126; ನೀಲ್ ವ್ಯಾಗ್ನರ್‌ 47ಕ್ಕೆ5, ಟಿಮ್‌ ಸೌಥಿ 76ಕ್ಕೆ3).

ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್‌, 118 ಓವರ್‌ಗಳಲ್ಲಿ 4 ವಿಕೆಟ್‌ಗೆ 451 (ಜೀತ್‌ ರಾವಲ್‌ 132, ಟಾಮ್‌ ಲಾಥಮ್‌ 161, ಕೇನ್ ವಿಲಿಯಮ್ಸನ್‌ ಬ್ಯಾಟಿಂಗ್‌ 93, ಹೆನ್ರಿ ನಿಕೋಲ್ಸ್‌ 53; ಸೌಮ್ಯ ಸರ್ಕಾರ್‌ 57ಕ್ಕೆ2, ಮಹಮೂದುಲ್ಲಾ 3ಕ್ಕೆ1, ಮೆಹದಿ ಹಸನ್‌ 149ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !