ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇನ್‌ ನಾಯಕತ್ವದ ಬಗ್ಗೆ ಅಸಮಾಧಾನವಿಲ್ಲ: ನ್ಯೂಜಿಲೆಂಡ್ ಕೋಚ್‌ ಗ್ಯಾರಿ ಸ್ಟೀಡ್

ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗ್ಯಾರಿ ಸ್ಟೀಡ್‌ ಸ್ಪಷ್ಟನೆ
Last Updated 13 ಜುಲೈ 2020, 12:45 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ‘ಕೇನ್‌ ವಿಲಿಯಮ್ಸನ್‌ ಅವರನ್ನು ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿಸಲು ನಾನು ಪ್ರಯತ್ನಿಸಿದ್ದಾಗಿ ಹಲವರು ಆರೋಪಿಸಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ. ಅವೆಲ್ಲವೂ ಸತ್ಯಕ್ಕೆ ದೂರವಾದುವು’ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗ್ಯಾರಿ ಸ್ಟೀಡ್‌ ಸೋಮವಾರ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಮುಕ್ತಾಯಗೊಂಡಿದ್ದಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಕಿವೀಸ್‌ ನಾಡಿನ ತಂಡ 0–3ರಿಂದ ಸೋತಿತ್ತು. ಆ ಸರಣಿಯ ನಂತರ ವಿಲಿಯಮ್ಸನ್‌ ಅವರನ್ನು ನಾಯಕತ್ವದಿಂದ ತೆಗೆದುಹಾಕಿ ಆ ಜವಾಬ್ದಾರಿಯನ್ನು ಟಾಮ್‌ ಲಥಾಮ್‌ಗೆ ನೀಡುವಂತೆ ಸ್ಟೀಡ್‌ ಅವರು ನ್ಯೂಜಿಲೆಂಡ್‌ ಕ್ರಿಕೆಟ್‌ಗೆ (ಎನ್‌ಜೆಡ್‌ಸಿ) ಒತ್ತಾಯಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

‘ನಾಯಕತ್ವ ಬದಲಾವಣೆ ವಿಚಾರವಾಗಿ ನಾನು ಯಾವತ್ತೂ ಎನ್‌ಜೆಡ್‌ಸಿ ಜೊತೆ ಚರ್ಚಿಸಿಯೇ ಇಲ್ಲ. ವಿಲಿಯಮ್ಸನ್‌ ಅವರು ಪ್ರತಿಭಾನ್ವಿತ ಆಟಗಾರ. ಜೊತೆಗೆ ಉತ್ತಮ ನಾಯಕ ಕೂಡ. ಅವರನ್ನು ಕೆಳಗಿಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸ್ಟೀಡ್‌ ತಿಳಿಸಿದ್ದಾರೆ.

‘ವಿಲಿಯಮ್ಸನ್‌ ಮತ್ತು ನನ್ನ ನಡುವೆ ಉತ್ತಮ ಬಾಂಧವ್ಯವಿದೆ. ಅವರು ಕ್ರಿಕೆಟ್‌ ಲೋಕದ ಸಭ್ಯ ಆಟಗಾರ. ವ್ಯಕ್ತಿಗತ ವಿಚಾರಧಾರೆಗಳಲ್ಲಿ ನನಗೂ ಅವರಿಗೂ ಕೊಂಚ ಭಿನ್ನತೆ ಇದೆ. ಅದು ಸಹಜ’ ಎಂದಿದ್ದಾರೆ.

2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಪಂದ್ಯ ನಡೆದು ಮಂಗಳವಾರಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಆ ಹಣಾಹಣಿಯಲ್ಲಿ ಕಿವೀಸ್‌ ತಂಡ ಆತಿಥೇಯ ಇಂಗ್ಲೆಂಡ್‌ ಎದುರು ಸೋತಿತ್ತು. ವಿಲಿಯಮ್ಸನ್‌ ಬಳಗಕ್ಕೆ ‘ಬೌಂಡರಿ ಕೌಂಟ್‌’ ನಿಯಮವು ಮುಳುವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ 48 ವರ್ಷ ವಯಸ್ಸಿನ ಸ್ಟೀಡ್‌ ‘ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ನಮ್ಮ ಆಟಗಾರರು ಶ್ರೇಷ್ಠ ಸಾಮರ್ಥ್ಯ ತೋರಿದ್ದರು. ಫೈನಲ್‌ನಲ್ಲೂ ಚೆನ್ನಾಗಿಯೇ ಆಡಿದ್ದರು. ಹೀಗಿದ್ದರೂ ಪ್ರಶಸ್ತಿ ಗೆಲ್ಲಲು ಆಗಿರಲಿಲ್ಲ. ಹೀಗಾಗಿ ಎಲ್ಲರಿಗೂ ತುಂಬಾ ನೋವಾಗಿತ್ತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT