ಗುರುವಾರ , ಜೂಲೈ 2, 2020
28 °C

ಟಿ20 ವಿಶ್ವಕಪ್ ರದ್ದು ಮಾಡುವ ಆಯ್ಕೆಯೂ ನಮ್ಮ ಮುಂದಿದೆ: ಕುಮಾರ ಸಂಗಕ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೊರೊನಾ ವೈರಸ್‌ ಒಡ್ಡಿರುವ ಈ ಸಂಕಟದ ವರ್ಷದಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ರದ್ದು ಪಡಿಸುವ ಆಯ್ಕೆಯೂ ಇದೆ ಎಂದು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ (ಎಂಸಿಸಿ) ಮುಖ್ಯಸ್ಥ ಕುಮಾರ ಸಂಗಕ್ಕಾರ ಹೇಳಿದ್ದಾರೆ.

‘ಪ್ರತಿದಿನವೂ ಕಲಿಕೆಗೆ ಹೊಸ ವಿಷಯಗಳು ಇರುತ್ತವೆ. ಆದ್ದರಿಂದ ಎಲ್ಲದಕ್ಕೂ ಒಂದು ಸಮಯ ಇರುತ್ತದೆ. ತಾಳ್ಮೆಯಿಂದ ಕಾದು ನೋಡೋಣ. ಟಿ20 ವಿಶ್ವಕಪ್‌ ಆಯೋಜನೆಯ ಬಗ್ಗೆ ಏನೇನು ಆಯ್ಕೆಗಳಿವೆ ಪರಿಶೀಲಿಸಲಾಗುತ್ತದೆ. ಅದರಲ್ಲೊಂದು ರದ್ದುಪಡಿಸುವುದು ಕೂಡ ಒಂದಾಗಿದೆ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಿನ್ನಲೆಯಲ್ಲಿ ಆಳವಾದ ಮತ್ತು ಕೂಲಂಕಷವಾದ ಅಧ್ಯಯನ ಅಗತ್ಯವಿರುತ್ತದೆ’ ಎಂದು ಸಂಗಕ್ಕಾರ ಹೇಳಿದ್ದಾರೆ.

‘ಕೊರೊನಾ ವೈರಸ್‌ ಕುರಿತು ಯಾವುದೇ ಸ್ಪಷ್ಟವಾದ ಮಾಹಿತಿಗಳು ಲಭ್ಯವಿಲ್ಲ. ಸಾರ್ಸ್‌ ಅಥವಾ ಮರ್ಸ್‌ ತರಹ ವಾತಾವರಣದಿಂದ ಮಾಯವಾಗುತ್ತದೆಯೇ? ಪ್ರತಿಯೊಂದು ಋತುವಿನಲ್ಲಿಯೂ ಕಾಡುತ್ತದೆಯೇ?  ಎಂಬ ಯಾವ ಅಂಶಗಳೂ ಸ್ಪಷ್ಟವಾಗಿಲ್ಲ. ಆದ್ದರಿಂದ ಈಗಲೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಯಾರಿಗೂ ಸಾಧ್ಯವಾಗುತ್ತಿಲ್ಲ’ ಎಂದು ಸ್ಟಾರ್ ಸ್ಫೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಸಂಗಕ್ಕಾರ ಹೇಳಿದ್ದಾರೆ.

‘ಐಸಿಸಿಯು ಪರಿಣತರೊಂದಿಗೆ ನಿರಂತರವಾಗಿ ಚರ್ಚೆ ನಡೆಸುತ್ತಿದೆ. ಪರಿಸ್ಥಿತಿಯ ಅವಲೋಕನ ನಡೆಸುತ್ತಿದೆ. ನಾವು ಕೂಡ ಅದರಲ್ಲಿ ಭಾಗಿಯಾಗಿದ್ದೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು