ಗುರುವಾರ , ಮಾರ್ಚ್ 23, 2023
21 °C

T20 WC: ಇಂಗ್ಲೆಂಡ್‌ ಅನ್ನು ಸೋಲಿಸಬಲ್ಲ ಆ ಎರಡು ತಂಡಗಳ ಬಗ್ಗೆ ಕೆಪಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ದುಬೈ: ಪ್ರಸ್ತುತ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಜೇಯ ಓಟ ಮುಂದುವರಿಸಿರುವ ಇಂಗ್ಲೆಂಡ್‌ ತಂಡವನ್ನು ಕೇವಲ ಎರಡು ತಂಡಗಳು ಮಾತ್ರವೇ ಸೋಲಿಸಬಲ್ಲವು ಎಂದು ಮಾಜಿ ಕ್ರಿಕೆಟಿಗ ಮತ್ತು ಕ್ರಿಕೆಟ್‌ ವಿಶ್ಲೇಷಕ ಕೆವಿನ್‌ ಪೀಟರ್ಸನ್‌ (ಕೆಪಿ) ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಕೆಪಿ, ಇಂಗ್ಲೆಂಡ್‌ ತಂಡದ ಸದ್ಯದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಇಪಿಎಲ್‌) ಆಡುವ ಚೆಲ್ಸಾ ಫುಟ್‌ಬಾಲ್‌ ಕ್ಲಬ್‌ನ ಅಭಿಮಾನಿಯೂ ಆಗಿರುವ ಕೆಪಿ, ಇಂಗ್ಲೆಂಡ್‌ ತಂಡವನ್ನು ಚೆಲ್ಸಾಗೆ ಹೋಲಿಸಿ ಟ್ವೀಟ್‌ ಮಾಡಿದ್ದಾರೆ. ಇಪಿಎಲ್‌ ಪಾಯಿಂಟ್‌ ಪಟ್ಟಿಯಲ್ಲಿ ಚೆಲ್ಸಾ ಅಗ್ರಸ್ಥಾನದಲ್ಲಿದೆ.

ʼಪಾಕಿಸ್ತಾನ ಅಥವಾ ಆಫ್ಗಾನಿಸ್ತಾನ ಮಾತ್ರವೇ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಬಲ್ಲವು. ಆದರೆ, ಪಂದ್ಯವು ಶಾರ್ಜಾದಲ್ಲಿ ನಡೆಯಬೇಕಿದೆ. ಪಂದ್ಯ ಬೇರೆ ಎಲ್ಲಿಯಾದರೂ ನಡೆದರೆ ಇಂಗ್ಲೆಂಡ್‌ಗೆ ಟ್ರೋಫಿ ನೀಡಿʼ ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆಪಿ ತಿಳಿಸಿದ್ದಾರೆ.

ಇಂಗ್ಲೆಂಡ್‌ ತಂಡ ಮೊದಲ ಗುಂಪಿನಲ್ಲಿ ಆಡಿರುವ ಪಂದ್ಯಗಳಲ್ಲಿ ಕ್ರಮವಾಗಿ ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಜಯ ಸಾಧಿಸಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು