ಕರಾಚಿ: ಕೋವಿಡ್–19 ಭೀತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ತರಬೇತಿ ಶಿಬಿರವನ್ನು ರದ್ದು ಮಾಡಿದೆ. ನಿಗದಿತ ಸಮಯಕ್ಕೆ ಮುಂಚಿತವಾಗಿ ಇಂಗ್ಲೆಂಡ್‌ಗೆ ಬರಲು ತಂಡಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಮನವಿ ಮಾಡಿದೆ.

ಎರಡೂ ತಂಡಗಳ ನಡುವೆ ಆಗಸ್ಟ್‌ನಲ್ಲಿ ಕ್ರಿಕೆಟ್ ಸರಣಿ ನಡೆಯಲಿದ್ದು, ಅದಕ್ಕಿಂತ 40 ದಿನ ಮುಂಚಿತವಾಗಿ ಇಂಗ್ಲೆಂಡ್ ತಲುಪಲು ಪಾಕಿಸ್ತಾನ ಬಯಸಿದೆ.

ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 2,000ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ ವರದಿಯಾಗಿದೆ.

‘ಮುಂಬರುವ ವಾರಗಳಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಬಹುದಾದ ಕೋವಿಡ್–19 ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡಾಗ ಆಟಗಾರರ ಸುರಕ್ಷತೆ ವಿಷಯ ಸವಾಲಾಗಿ ಪರಿಣಮಿಸಿವೆ. ಇಂಗ್ಲೆಂಡ್‌ಗೆ ತಲುಪುವ ಮುನ್ನ ಯಾವುದೇ ತರಬೇತಿ ಶಿಬಿರ ನಡೆಸದಿರಲು ನಿರ್ಧರಿಸಲಾಗಿದೆ’ ಎಂದು ಪಿಸಿಬಿ ಹೇಳಿದೆ.

ನಿಗದಿಯಂತೆ ಪಾಕಿಸ್ತಾನ ತಂಡ ಜುಲೈ 6ರಂದು ಇಂಗ್ಲೆಂಡ್ ತಲುಪಬೇಕಿದೆ.

ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಹಾಗೂ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.