ಸೌತಾಂಪ್ಟನ್: ರಿಷಭ್ ಪಂತ್ ಮಿಂಚಿನ ಶತಕ, ಶುಭಮನ್ ಗಿಲ್ ಅರ್ಧಶತಕದ ಸೊಬಗು ಮತ್ತು ವಿರಾಟ್ ಕೊಹ್ಲಿ ಬೌಲಿಂಗ್..

ಹೌದು; ಶನಿವಾರ ಇಲ್ಲಿ ನಡೆದ ಭಾರತ ತಂಡದ ಅಭ್ಯಾಸ ಪಂದ್ಯದ ವಿಶೇಷಗಳು ಇವು. ಇದೇ 18ರಂದು ಇಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಆಡಲಿರುವ ಭಾರತ ಬಳಗವು ಎರಡು ಬಣಗಳನ್ನು ಮಾಡಿಕೊಂಡು ಅಭ್ಯಾಸ ಪಂದ್ಯ ಆಡಿತು.

ಒಂದು ತಂಡಕ್ಕೆ ವಿರಾಟ್ ಕೊಹ್ಲಿ ಮತ್ತೊಂದಕ್ಕೆ ಕೆ.ಎಲ್. ರಾಹುಲ್ ನಾಯಕತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ರಿಷಭ್ 94 ಎಸೆತಗಳಲ್ಲಿ ಅಜೇಯ 121 ರನ್ ಗಳಿಸಿದರು. ಹೋದ ವರ್ಷ ಆಸ್ಟ್ರೇಲಿಯಾ ಮತ್ತು ಭಾರತದ ಆತಿಥ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ರಿಷಭ್ ಇಲ್ಲಿಯೂ ತಮ್ಮ ಸಾಮರ್ಥ್ಯ ಮೆರೆಯಲು ಅಣಿಯಾಗಿದ್ದಾರೆ. ಪಂತ್ ತಮ್ಮ ತಂಡದ ಅನುಭವಿ ಬೌಲರ್‌ಗಳನ್ನು ಕಾಡಿದರು. ವೇಗಿಗಳು ಮತ್ತು ಸ್ಪಿನ್ನರ್‌ಗಳನ್ನು ದಂಡಿಸಿದರು. ರೋಹಿತ್ ಶರ್ಮಾ ಜೊತೆಗೆ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ 135 ಎಸೆತಗಳಲ್ಲಿ 85 ರನ್‌ಗಳನ್ನು ಗಳಿಸಿದರು.

ಬಹಳ ದಿನಗಳ ನಂತರ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದರು. ಅವರ ಎಸೆತಗಳನ್ನು ರಾಹುಲ್ ಎದುರಿಸಿದರು. ಈ ವಿಡಿಯೊವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.