ಮಂಗಳವಾರ, ಜೂನ್ 15, 2021
22 °C

ಐಪಿಎಲ್‌: ಜಾಹೀರಾತುದಾರರಿಗೆ ‘ಸ್ಟಾರ್‌’ ಅಭಯ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಈ ವರೆಗೆ ಆಗಿರುವ ಪಂದ್ಯಗಳಿಗೆ ಸಂಬಂಧಪಟ್ಟ ಮೊತ್ತ ಮಾತ್ರ ಪಾವತಿಸಿದರೆ ಸಾಕು ಎಂದು ಜಾಹೀರಾತುದಾರರು ಮತ್ತು ಪ್ರಾಯೋಜಕರಿಗೆ ಸ್ಟಾರ್‌ ಸ್ಪೋರ್ಟ್ಸ್‌ ತಿಳಿಸಿದೆ.

ಐಪಿಎಲ್‌ನ 2018ರಿಂದ 2022ರ ವರೆಗಿನ ಆವೃತ್ತಿಗಳ ಟೆಲಿವಿಷನ್ ಮತ್ತು ಡಿಜಿಟಲ್ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ ₹ 16348 ಕೋಟಿಗಳಿಗೆ ಪಡೆದುಕೊಂಡಿದೆ. ಈ ಬಾರಿ ಒಟ್ಟು 60 ಪಂದ್ಯಗಳು ನಡೆಯಬೇಕಾಗಿತ್ತು. ಆದರೆ ಕೋವಿಡ್‌ನಿಂದಾಗಿ ಮುಂದೂಡುವ ವರೆಗೆ 29 ಪಂದ್ಯಗಳು ಮಾತ್ರ ನಡೆದಿವೆ.

ಪ್ರತಿ ಪಂದ್ಯಕ್ಕೆ ₹ 54.5 ಕೋಟಿ ಮೊತ್ತವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸ್ಟಾರ್ ಸ್ಪೋರ್ಟ್ಸ್ ನೀಡಲು ಒಪ್ಪಿಕೊಂಡಿತ್ತು. ಟೂರ್ನಿಯನ್ನು ಮುಂದೂಡಿದ್ದರಿಂದ ಜಾಹೀರಾತುದಾರರು ಮತ್ತು ಪ್ರಾಯೋಜಕರು ಗೊಂದಲಕ್ಕೆ ಒಳಗಾಗಿದ್ದರು. ನಷ್ಟವಾಗಿರುವುದರ ಬಗ್ಗೆ ಕೆಲವರು ನೋವು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ ಸ್ಪಷ್ಟನೆ ನೀಡಿದೆ. ಟೂರ್ನಿಯನ್ನು ಬಿಸಿಸಿಐ ಮುಂದುವರಿಸಿದರೆ ಜಾಹೀರಾತುದಾರರ ಜೊತೆಗಿನ ಸ್ಟಾರ್‌ ಸ್ಪೋರ್ಟ್ಸ್ ಒಪ್ಪಂದ ಕೂಡ ಮುಂದುವರಿಯಲಿದೆ.   

ಈ ಬಾರಿಯ ಟೂರ್ನಿಗೆ ಸಂಬಂಧಿಸಿ ಸ್ಟಾರ್ ಸ್ಪೋರ್ಟ್ಸ್ 18 ಪ್ರಾಯೋಜಕ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತಿದ್ದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌, ಒಟಿಟಿ ಮುಂತಾದವರು 14 ಪ್ರಾಯೋಜಕರೊಂದಿಗೆ ಒಪ್ಪಂದ ಹೊಂದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು