ಶುಕ್ರವಾರ, ಏಪ್ರಿಲ್ 10, 2020
19 °C

ಏಷ್ಯಾಕಪ್‌ ಆತಿಥ್ಯ: ಹಿಂದೆಸರಿವ ಸುಳಿವು ನೀಡಿದ ಪಾಕಿಸ್ತಾನ

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ಈ ವರ್ಷ ನಿಗದಿಯಾಗಿರುವ ಏಷ್ಯಾ ಕಪ್‌ ಟಿ–20 ಆತಿಥ್ಯದಿಂದ ಪಾಕಿಸ್ತಾನ ಹಿಂದೆ ಸರಿಬಹುದು ಎಂಬ ಸುಳಿವನ್ನು ಆ ದೇಶದ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷ ಎಹ್ಸಾನ್‌ ಮಣಿ ಬುಧವಾರ ನೀಡಿದ್ದಾರೆ.

ಪಾಕಿಸ್ತಾನ್‌ ಸೂಪರ್‌ ಲೀಗ್‌ ಟ್ರೋಫಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಮಣಿ, ‘ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ನ (ಎಸಿಸಿ) ಇತರ ರಾಷ್ಟ್ರಗಳ ಜೊತೆ ಚರ್ಚೆಯ ನಂತರ ಏಷ್ಯಾ ಕಪ್‌ ನಡೆಯುವ ಸ್ಥಳದ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು’ ಎಂದು ತಿಳಿಸಿದರು. 

ಎಸಿಸಿಯ ಸಭೆ ಮಾರ್ಚ್‌ ಮೊದಲ ವಾರ ನಡೆಯಲಿದ್ದು, ಅಲ್ಲಿ ಟೂರ್ನಿಯ ವಿವರಗಳನ್ನು ಅಂತಿಮಗೊಳಿಸಲಾಗುವುದು ಎಂದು ಮಣಿ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು