ಮಂಗಳವಾರ, ಫೆಬ್ರವರಿ 25, 2020
19 °C

ಕ್ರಿಕೆಟ್: ಸ್ಟಾರ್ಕ್‌ ದಾಳಿಗೆ ತತ್ತರಿಸಿದ ಕಿವೀಸ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪರ್ತ್ : ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಬಿರುಗಾಳಿ ವೇಗದ ದಾಳಿಗೆ  ನ್ಯೂಜಿಲೆಂಡ್ ತಂಡವು ತತ್ತರಿಸಿತು.

ಇಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮಾರ್ನಸ್ ಲಾಬುಶೇನ್ (143 ರನ್) ಶತಕ ಮತ್ತು ಟ್ರಾವಿಸ್ ಹೆಡ್ (56 ರನ್) ಅರ್ಧಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 146.2 ಓವರ್‌ಗಳಲ್ಲಿ 416 ರನ್‌ ಗಳಿಸಿತು. ಕಿವೀಸ್ ತಂಡದ ಟಿಮ್ ಸೌಥಿ ಮತ್ತು ನೀಲ್ ವಾಗ್ನರ್ ಅವರು ತಲಾ ನಾಲ್ಕು ವಿಕೆಟ್ ಗಳಿಸಿದರು.

ಅದಕ್ಕುತ್ತರವಾಗಿ ನ್ಯೂಜಿಲೆಂಡ್ ತಂಡವು ಎರಡನೇ ದಿನವಾದ  ಶುಕ್ರವಾರ ದಿನದಾಟದ ಅಂತ್ಯಕ್ಕೆ 32 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 109 ರನ್‌ ಗಳಿಸಿದೆ. ಇದಕ್ಕೆ ಕಾರಣವಾಗಿದ್ದು ಸ್ಟಾರ್ಕ್ (31ಕ್ಕೆ4)  ಬೌಲಿಂಗ್.

ಟಾಮ್ ಲಥಾಮ್, ನಾಯಕ ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್‌ ಮತ್ತು ನೀಲ್ ವಾಗ್ನರ್ ವಿಕೆಟ್‌ಗಳನ್ನು ಗಳಿಸಿದರು. ಲಥಾಮ್ ಮತ್ತು ನೀಲ್ ಖಾತೆಯನ್ನೇ ತೆರೆಯಲಿಲ್ಲ. ಸ್ಟಾರ್ಕ್‌ಗೆ ಉತ್ತಮ ಜೊತೆ ನೀಡಿದ ಹ್ಯಾಜಲ್‌ವುಡ್ ಆರಂಭಿಕ ಆಟಗಾರ ಜೀತ್ ರಾವಳ್ (1) ವಿಕೆಟ್‌ ಕಿತ್ತರು.

ಆದರೆ ಆಸ್ಟ್ರೇಲಿಯಾದ ವೇಗಿಗಳ ದಾಳಿಯನ್ನು ದಿಟ್ಟತನದಿಂದ ಎದುರಿಸಿದ ರಾಸ್ ಟೇಲರ್ (ಬ್ಯಾಟಿಂಗ್ 66, 86ಎ, 8ಬೌಂ) ತಂಡದ ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ.  ಅವರೊಂದಿಗೆ ಬ್ರಾಡ್ಲಿ ವಾಟ್ಲಿಂಗ್ ಕೂಡ ಕ್ರೀಸ್‌ನಲ್ಲಿದ್ದಾರೆ. ಎಂಟು ಎಸೆತಗಳನ್ನು ಎದುರಿಸಿರುವ ಅವರು ಇನ್ನೂ ಖಾತೆ ತೆರೆದಿಲ್ಲ.

 ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 146.2 ಓವರ್‌ಗಳಲ್ಲಿ 416 (ಡೇವಿಡ್ ವಾರ್ನರ್ 43, ಮಾರ್ನಸ್ ಲಾಬುಶೇನ್ 143, ಸ್ಟೀವ್ ಸ್ಮಿತ್ 43, ಟ್ರಾವಿಸ್ ಹೆಡ್ 56, ಟಿಮ್ ಪೆನ್ 39, ಪ್ಯಾಟ್ ಕಮಿನ್ಸ್ 20, ಮಿಚೆಲ್ ಸ್ಟಾರ್ಕ್ 30, ಟಿಮ್ ಸೌಥಿ 93ಕ್ಕೆ4, ನೀಲ್ ವಾಗ್ನರ್ 92ಕ್ಕೆ4)  ನ್ಯೂಜಿಲೆಂಡ್: 32 ಓವರ್‌ಗಳಲ್ಲಿ 5ಕ್ಕೆ109 (ಕೇನ್ ವಿಲಿಯಮ್ಸನ್ 34, ರಾಸ್ ಟೇಲರ್ ಬ್ಯಾಟಿಂಗ್ 66, ಮಿಚೆಲ್ ಸ್ಟಾರ್ಕ್ 31ಕ್ಕೆ4)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು