ಶುಕ್ರವಾರ, ನವೆಂಬರ್ 15, 2019
23 °C

ರಿಷಭ್‌ರನ್ನು ಅವರ ಪಾಡಿಗೆ ಬಿಡಿ: ಟೀಕಾಕಾರರಲ್ಲಿ ರೋಹಿತ್ ಶರ್ಮಾ ಮನವಿ

Published:
Updated:

ನಾಗಪುರ: ವಿಕೆಟ್‌ಕೀಪರ್ ರಿಷಭ್ ಪಂತ್ ಅವರನ್ನು ಅವರ ಪಾಡಿಗೆ ಬಿಟ್ಟುಬಿಡುವುದು ಒಳ್ಳೆಯದು. ಪಂತ್ ಬಗ್ಗೆ ಬಹಳಷ್ಟು ಟೀಕೆಗಳು ಕೇಳಿಬರುತ್ತಿವೆ. ಆದರೆ ಅವರಿಗೆ ಸ್ವಲ್ಪ ಸಮಯ ನೀಡಬೇಕು. ಅವರು ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದಕ್ಕೆ ಅವಕಾಶ ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ಟೀಕಾಕಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ವಿಕೆಟ್‌ಕೀಪಿಂಗ್‌ನಲ್ಲಿ ಕೆಲವು ಲೋಪಗಳನ್ನು ಮಾಡಿದ್ದರು. ಇತ್ತೀಚೆಗಿನ ಕೆಲವು ಪಂದ್ಯಗಳಲ್ಲಿ ಅವರು ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.

ಶನಿವಾರ ಸುದ್ದಿಗಾರರು ರಿಷಭ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ  ರೋಹಿತ್, ‘ಅವರು ನಿರ್ಭೀತ ಕ್ರಿಕೆಟಿಗ. ಅವರಿಗೆ ಅಂತಹ ಮುಕ್ತ ವಾತಾವರಣ ವಾತಾವರಣ ಕಲ್ಪಿಸಬೇಕು. ಆಧ್ದರಿಂದ ನೀವು (ಮಾಧ್ಯಮದವರು) ಸ್ವಲ್ಪ ಕಾಲ ಅವರ ಮೇಲಿಂದ ದೃಷ್ಟಿ ಸರಿಸಿಕೊಳ್ಳಿರಿ’ ಎಂದು ಕೋರಿದರು.

ಪ್ರತಿಕ್ರಿಯಿಸಿ (+)