ಮಂಗಳವಾರ, ಆಗಸ್ಟ್ 20, 2019
24 °C
ಭಾರತದ ವಿರುದ್ಧ ಟೆಸ್ಟ್‌ ಸರಣಿ

ಡುಪ್ಲೆಸಿಗೆ ನಾಯಕತ್ವ

Published:
Updated:

ಜೋಹಾನ್ಸ್‌ಬರ್ಗ್‌ (ಎಎಫ್‌ಪಿ): ಭಾರತ ತಂಡದ ವಿರುದ್ಧ ಅಕ್ಟೋಬರ್‌ನಲ್ಲಿ ನಡೆಯುವ ಟೆಸ್ಟ್‌ ಸರಣಿಯಲ್ಲಿ ಫಾಫ್‌ ಡುಪ್ಲೆಸಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಲಿರುವರು. ಆದರೆ ಎಲ್ಲ ಮಾದರಿಗಳಿಗೆ ಅವರದೇ ನಾಯಕತ್ವ ಇರುವ ಸಾಧ್ಯತೆಯಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಹಂಗಾಮಿ ನಿರ್ದೇಶಕ ಕೋರಿ ವ್ಯಾನ್‌ ಜಿಲ್‌ ತಿಳಿಸಿದ್ದಾರೆ.

ಮುಖ್ಯ ಕೋಚ್‌ ಒಟ್ಟಿಸ್‌ ಗಿಬ್ಸನ್‌ ಹಾಗೂ ಕೋಚಿಂಗ್‌ ಸಿಬ್ಬಂದಿಯನ್ನು ದಕ್ಷಿಣ ಆಫ್ರಿಕಾ ತಂಡದಿಂದ ಉಚ್ಚಾಟಿಸಿದ ಬಳಿಕ ಹಂಗಾಮಿ ಸ್ಥಾನದಲ್ಲಿ ವ್ಯಾನ್‌ ಜಿಲ್‌ ಅವರನ್ನು ನೇಮಿಸಲಾಗಿತ್ತು. 2023 ವಿಶ್ವಕ‍ಪ್‌ ಸೇರಿದಂತೆ ಮುಂದಿನ ಟೂರ್ನಿಗಳಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಆಯ್ಕೆ ಸಮಿತಿ ಸಭೆ ನಡೆಸುವುದಾಗಿ ಜಿಲ್‌ ಹೇಳಿದ್ದಾರೆ.

‘ಫಾಪ್‌ ಟೆಸ್ಟ್‌ ತಂಡದ ನಾಯಕತ್ವ ವಹಿಸಲಿದ್ದಾರೆ. ಆದರೆ ನಾವು ಭವಿಷ್ಯದ ಬಗ್ಗೆ ಯೋಚಿಸಬೇಕಿದೆ. 2023ರ ವಿಶ್ವಕಪ್‌ ಕುರಿತು ಮಾತುಕತೆ ನಡೆಸಬೇಕಿದೆ ಎಂದರು.

ದಕ್ಷಿಣ ಆಫ್ರಿಕಾ, ಭಾರತ ತಂಡದ ವಿರುದ್ಧ ಮುಂದಿನ ತಿಂಗಳು ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಂಗವಾಗಿ ಅಕ್ಟೋಬರ್‌ 2ರಿಂದ ಭಾರತದ ವಿರುದ್ಧ ಟೆಸ್ಟ್‌ ಸರಣಿ ಆರಂಭವಾಗಲಿದೆ.

Post Comments (+)