ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಐಪಿಎಲ್ ಅರ್ಧ ಪಯಣ ಮುಗಿದಾಗ ಅಂಕಪಟ್ಟಿ ಹೀಗಿದೆ

Last Updated 24 ಏಪ್ರಿಲ್ 2022, 12:54 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅರ್ಧ ಪಯಣ ಮುಗಿದಾಗ (36 ಪಂದ್ಯ) ನೂತನ ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇದೇ ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಗುಜರಾತ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ ಒಟ್ಟು 12 ಅಂಕ ಸಂಪಾದಿಸಿದೆ.

ಅಚ್ಚರಿಯೆಂಬಂತೆ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಸನ್‌ರೈಸರ್ಸ್ ಹೈದರಾಬಾದ್, ಬಳಿಕದ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಏಳು ಪಂದ್ಯಗಳಲ್ಲಿ ಅಷ್ಟೇ ಅಂಕ ಸಂಪಾದಿಸಿರುವ ರಾಜಸ್ಥಾನ್ ರಾಯಲ್ಸ್, ರನ್‌ರೇಟ್ ಲೆಕ್ಕಾಚಾರದಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ್ದು, ಮೂರನೇ ಸ್ಥಾನ ಪಡೆದಿದೆ.

ಹೈದರಾಬಾದ್ ವಿರುದ್ಧ ಹೀನಾಯ ಸೋಲು ಎದುರಿಸಿರುವ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಟು ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಗುಜರಾತ್ ಜೊತೆಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಲಖನೌ ಸೂಪರ್ ಜೈಂಟ್ಸ್, ಅಗ್ರ ಐದರಲ್ಲಿ ಸ್ಥಾನ ಪಡೆದಿದೆ. ಚೊಚ್ಚಲ ಕಿರೀಟ ಎದುರು ನೋಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಆರು ಮತ್ತು ಪಂಜಾಬ್ ಕಿಂಗ್ಸ್ ಎಂಟನೇ ಸ್ಥಾನದಲ್ಲಿದೆ. ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ಆರು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ಐಪಿಎಲ್‌ನಲ್ಲಿ ದಾಖಲೆಯ ಐದು ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್, ಈವರೆಗಿನ ಎಲ್ಲ ಏಳು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ರೋಹಿತ್ ಬಳಗ ಇನ್ನಷ್ಟೇ ಖಾತೆ ತೆರೆಯಬೇಕಿದೆ.

ನಾಲ್ಕು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಏಳು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದು ಒಂಬತ್ತನೇ ಸ್ಥಾನದಲ್ಲಿದೆ.

ಐಪಿಎಲ್ 2022 ಅಂಕಪಟ್ಟಿ (36ನೇ ಪಂದ್ಯ ಅಂತ್ಯಕ್ಕೆ):
ಗುಜರಾತ್ ಟೈಟನ್ಸ್: ಪಂದ್ಯ-7, ಗೆಲುವು-6, ಸೋಲು-1, ಅಂಕ-12
ಸನ್‌ರೈಸರ್ಸ್ ಹೈದರಾಬಾದ್: ಪಂದ್ಯ-7, ಗೆಲುವು-5, ಸೋಲು-2, ಅಂಕ-10
ರಾಜಸ್ಥಾನ್ ರಾಯಲ್ಸ್: ಪಂದ್ಯ-7, ಗೆಲುವು-5, ಸೋಲು-2, ಅಂಕ-10
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಪಂದ್ಯ-8, ಗೆಲುವು-5, ಸೋಲು-3, ಅಂಕ-10
ಲಖನೌ ಸೂಪರ್ ಜೈಂಟ್ಸ್: ಪಂದ್ಯ-7, ಗೆಲುವು-4, ಸೋಲು-3, ಅಂಕ-8
ಡೆಲ್ಲಿ ಕ್ಯಾಪಿಟಲ್ಸ್: ಪಂದ್ಯ-7, ಗೆಲುವು-3, ಸೋಲು-4, ಅಂಕ-6
ಕೋಲ್ಕತ್ತ ನೈಟ್ ರೈಡರ್ಸ್: ಪಂದ್ಯ-8, ಗೆಲುವು-3, ಸೋಲು-5, ಅಂಕ-6
ಪಂಜಾಬ್ ಕಿಂಗ್ಸ್: ಪಂದ್ಯ-7, ಗೆಲುವು-3, ಸೋಲು-4, ಅಂಕ-6
ಚೆನ್ನೈ ಸೂಪರ್ ಕಿಂಗ್ಸ್: ಪಂದ್ಯ-7, ಗೆಲುವು-2, ಸೋಲು-5, ಅಂಕ-4
ಮುಂಬೈ ಇಂಡಿಯನ್ಸ್: ಪಂದ್ಯ-7, ಗೆಲುವು-0, ಸೋಲು-7, ಅಂಕ-0

ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್:
ಜೋಸ್ ಬಟ್ಲರ್: ಪಂದ್ಯ-7, ರನ್-491, ಸರಾಸರಿ-81.83, ಸ್ಟ್ರೈಕ್‌ರೇಟ್-161.51, ಶತಕ-3, ಅರ್ಧಶತಕ-2, ಸಿಕ್ಸರ್-32
ಹಾರ್ದಿಕ್ ಪಾಂಡ್ಯ: ಪಂದ್ಯ-6, ರನ್-295, ಸರಾಸರಿ-73.75, ಸ್ಟ್ರೈಕ್‌ರೇಟ್-136.57, ಅರ್ಧಶತಕ-3, ಸಿಕ್ಸರ್-8
ಕೆ.ಎಲ್. ರಾಹುಲ್: ಪಂದ್ಯ-7, ರನ್-265, ಸರಾಸರಿ-44.17, ಸ್ಟ್ರೈಕ್‌ರೇಟ್-141.71, ಶತಕ-1, ಅರ್ಧಶತಕ-1, ಸಿಕ್ಸರ್-11
ಫಫ್ ಡುಪ್ಲೆಸಿ: ಪಂದ್ಯ-8, ರನ್-255, ಸರಾಸರಿ-31.88, ಸ್ಟ್ರೈಕ್‌ರೇಟ್-130.10, ಅರ್ಧಶತಕ-2, ಸಿಕ್ಸರ್-9
ಪೃಥ್ವಿ ಶಾ: ಪಂದ್ಯ-7, ರನ್-254, ಸರಾಸರಿ-36.29, ಸ್ಟ್ರೈಕ್‌ರೇಟ್-164.93, ಅರ್ಧಶತಕ-2, ಸಿಕ್ಸರ್-9

ಅತಿ ಹೆಚ್ಚು ವಿಕೆಟ್ ಗಳಿಸಿದ ಟಾಪ್ 5 ಬೌಲರ್‌ಗಳು:
ಯಜುವೇಂದ್ರ ಚಾಹಲ್: ಪಂದ್ಯ-7, ವಿಕೆಟ್-18, ಅತ್ಯುತ್ತಮ ಬೌಲಿಂಗ್-40/5, ಎಕಾನಮಿ-7.28
ಟಿ.ನಟರಾಜನ್: ಪಂದ್ಯ-7, ವಿಕೆಟ್-15, ಅತ್ಯುತ್ತಮ ಬೌಲಿಂಗ್-10/3, ಎಕಾನಮಿ-8.07
ಕುಲ್‌ದೀಪ್ ಯಾದವ್: ಪಂದ್ಯ-7, ವಿಕೆಟ್-13, ಅತ್ಯುತ್ತಮ ಬೌಲಿಂಗ್-35/4, ಎಕಾನಮಿ-8.47
ಡ್ವೇನ್ ಬ್ರಾವೊ: ಪಂದ್ಯ-7, ವಿಕೆಟ್-12, ಅತ್ಯುತ್ತಮ ಬೌಲಿಂಗ್-20/3, ಎಕಾನಮಿ-8.45
ಉಮೇಶ್ ಯಾದವ್: ಪಂದ್ಯ-8, ವಿಕೆಟ್-11, ಅತ್ಯುತ್ತಮ ಬೌಲಿಂಗ್-23/4, ಎಕಾನಮಿ-7.43

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT