ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಹರಿಯಾಣವನ್ನು ಎದುರಿಸುತ್ತಿರುವ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 267 ರನ್ಗಳಿಸಿದೆ.

ಟಾಸ್ ಗೆದ್ದ ಹರಿಯಾಣ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ಮೊದಲು ಬ್ಯಾಟ್ ಮಾಡಿತು.

ಕರ್ನಾಟಕದ ಪರ ಮಯಂಕ್ ಅಗರವಾಲ್ 91 ರನ್ಗಳಿಸಿದರು. ಪಡಿಕ್ಕಲ್ 43, ಸಮ್ರಾನ್ 35 ರನ್ ಹೊಡೆದು ಗಮನ ಸೆಳೆದರು. ಭರವಸೆ ಮೂಡಿಸಿದ್ದ ಕೆ. ಎಲ್ ರಾಹುಲ್ 26 ರನ್ಗಳಿಗೆ ಔಟಾದರು.

ವಿಕೆಟ್ಕೀಪರ್ ಬ್ಯಾಟರ್ ಕೃಷ್ಣನ್ ಶ್ರೀಜಿತ್ (18) ಬೌಲಿಂಗ್ ಆಲ್ರೌಂಡರ್ ಯಶೋವರ್ಧನ್ ಪರಂತಾಪ್ (27) ಅವರು ಕ್ರೀಸ್ನಲ್ಲಿದ್ದಾರೆ.

ಹರಿಯಾಣ ಪರ ಅನ್ಷುಲ್ ಕಾಂಭೋಜ್ ಹಾಗೂ ಅಂಜು ತಾಕ್ರಾಲ್ ತಲಾ 2 ವಿಕೆಟ್ ಪಡೆದರು

ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಹರಿಯಾಣದ ಎದುರಿನ ಈ ಪಂದ್ಯವು ಆತಿಥೇಯರಿಗೆ ನಿರ್ಣಾಯಕ. ಇದರಲ್ಲಿ ಸೋತರೆ ನಾಕೌಟ್ ಹಂತದ ಬಾಗಿಲು ಮುಚ್ಚಲಿದೆ. ಈ ಪಂದ್ಯದಲ್ಲಿ ಜಯಿಸುವುದರ ಜೊತೆಗೆ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೇರಳವು ಬಿಹಾರದ ವಿರುದ್ಧ ಸೋಲಬೇಕು ಅಥವಾ ಡ್ರಾ ಆಗಬೇಕು ಎಂದು ಪ್ರಾರ್ಥಿಸುವ ಅನಿವಾರ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.