ಮಂಗಳಪುರಂ (ಕೇರಳ): ಕರುಣ್ ನಾಯರ್ ಮತ್ತು ಆರ್. ಸ್ಮರಣ್ 'ತ್ರಿಶತಕದ ಜೊತೆಯಾಟದಿಂದಾಗಿ ಕರ್ನಾಟಕ ತಂಡವು ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಕೇರಳ ವಿರುದ್ಧ ಬಿಗಿಹಿಡಿತ ಸಾಧಿಸಿದೆ.

ತಲಾ ಒಂದು ದ್ವಿಶತಕ ಗಳಿಸಿದ ಕರುಣ್ (233; 389ಎಸೆತ, 4X25, 6X2) ಮತ್ತು ಸ್ಮರಣ್ (ಔಟಾಗದೇ 220; 390ಎ, 4X16, 6X3) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 343 (585ಎಸೆತ) ಸೇರಿಸಿದರು. ಇದರಿಂದಾಗಿ ತಂಡವು 167 ಓವರ್ಗಳಲ್ಲಿ 5 ವಿಕೆಟ್ಗಳಿಗೆ 586 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡವು ಎರಡನೇ ದಿನದಾಟದ ಮುಕ್ತಾಯಕ್ಕೆ10 ಓವರ್ಗಳಲ್ಲಿ 3 ವಿಕೆಟ್ಗಳಿಗೆ 21 ರನ್ ಗಳಿಸಿತು. ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ (7ಕ್ಕೆ2) ಆರಂಭದಲ್ಲಿಯೇ ಪೆಟ್ಟುಕೊಟ್ಟರು.

ಮೊದಲ ದಿನದಾಟದಲ್ಲಿ ಕರ್ನಾಟಕ ತಂಡವು 3 ವಿಕೆಟ್ಗಳಿಗೆ 319 ರನ್ ಗಳಿಸಿತ್ತು. 142 ರನ್ ಗಳಿಸಿದ್ದ ಕರುಣ್ ಹಾಗೂ 88 ರನ್ ಪೇರಿಸಿದ್ದ ಸ್ಮರಣ್ ಕ್ರೀಸ್ನಲ್ಲಿದ್ದರು. ಭಾನುವಾರ ಆಟ ಮುಂದುವರಿಸಿದ ಅವರ ಭರಾಟೆಯನ್ನು ತಡೆಯಲು ಕೇರಳ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ.

ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ದಾಖಲೆ ಇರುವ ಕರುಣ್ ಅವರು ಇಲ್ಲಿಯೂ ಅದೇ ಸಾಧನೆ ಮಾಡುವ ಭರವಸೆ ಮೂಡಿಸಿದ್ದರು. ಹೋದ ವರ್ಷದ ಋತುವಿನಲ್ಲಿ ವಿದರ್ಭ ತಂಡದಲ್ಲಿ ಆಡಿದ್ದ ಅವರು ರನ್ ಹೊಳೆ ಹರಿಸಿದ್ದರು. ಈ ವರ್ಷ ತವರಿಗೆ ಮರಳಿರುವ ಅವರು ಮೊದಲ ಪಂದ್ಯದಲ್ಲಿ ಅರ್ಧಶತಕ, ಎರಡನೇಯದ್ದರಲ್ಲಿ ಶತಕ ಹಾಗೂ ಮೂರನೇಯದ್ದರಲ್ಲಿ ದ್ವಿಶತಕ ಹೊಡೆದಿದ್ದಾರೆ.

ತಮ್ಮ ಇನಿಂಗ್ಸ್ನಲ್ಲಿ ಅವರು 22 ವರ್ಷದ ಸ್ಮರಣ್ ಅವರೊಂದಿಗೆ ಸಮನ್ವಯ ಸಾಧಿಸಿದ ರೀತಿ ಉತ್ತಮವಾಗಿತ್ತು. ಸ್ಮರಣ್ ಕೂಡ ತಾಳ್ಮೆಯಿಂದ ಆಡಿದರು. ಸೊಗಸಾದ ಹೊಡೆತಗಳನ್ನು ಪ್ರಯೋಗಿಸಿದ ಎಡಗೈ ಬ್ಯಾಟರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತಮ್ಮ ವೈಯಕ್ತಿಕ ಅತ್ಯಧಿಕ ಮೊತ್ತವನ್ನು ದಾಖಲಿಸಿ ಅಜೇಯವಾಗುಳಿದರು.

ಕರುಣ್ ಓಟಕ್ಕೆ ನೆಡುಮಾಂಕುಝಿ ಬಾಸಿಲ್ ಅವರು ತಡೆಯೊಡ್ಡಿದರು. ಶಾನ್ ರೋಜರ್ ಅಮೋಘ ಕ್ಯಾಚ್ ಪಡೆದರು. ಇನ್ನೊಂದು ಬದಿಯಲ್ಲಿದ್ದ ಸ್ಮರಣ್ ಇನಿಂಗ್ಸ್ ಹೊಣೆ ನಿಭಾಯಿಸಿದರು. ಅಭಿನವ್ ಮನೋಹರ್ 34 ಎಸೆತಗಳಲ್ಲಿ 20 ರನ್ ಗಳಿಸಿ ವೈಶಾಕ್ ಚಂದ್ರನ್ ಹೆಣೆದ ಎಲ್ಬಿಡಬ್ಲ್ಯು ಬಲೆಯಲ್ಲಿ ಬಿದ್ದರು. ಅಷ್ಟೊತ್ತಿಗೆ ತಂಡವು 500ರ ಗಡಿ ದಾಟಿತ್ತು. ಶ್ರೇಯಸ್ ಗೋಪಾಲ್ (ಅಜೇಯ 16) ಸ್ಮರಣ್ ಜೊತೆಗೆ ಕೆಲಹೊತ್ತು ಕ್ರೀಸ್ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 167 ಓವರ್ಗಳಲ್ಲಿ 5ಕ್ಕೆ586 ಡಿಕ್ಲೇರ್ಡ್ (ಕರುಣ್ ನಾಯರ್ 233, ಆರ್. ಸ್ಮರಣ್ ಔಟಾಗದೇ 220, ಅಭಿನವ್ ಮನೋಹರ್ 20, ಶ್ರೇಯಸ್ ಗೋಪಾಲ್ ಔಟಾಗದೇ 16, ಎನ್.ಪಿ. ಬಾಸಿಲ್ 101ಕ್ಕೆ2, ಎಂ.ಡಿ. ನಿಧೀಶ್ 65ಕ್ಕೆ1) ಕೇರಳ: 10 ಓವರ್ಗಳಲ್ಲಿ 3ಕ್ಕೆ21 (ಎನ್.ಪಿ. ಬಾಸಿಲ್ ಔಟಾಗದೇ 11, ಅಕ್ಷಯ್ ಚಂದ್ರನ್ ಔಟಗದೇ 6, ವಿದ್ವತ್ ಕಾವೇರಪ್ಪ 7ಕ್ಕೆ2, ವೈಶಾಖ ವಿಜಯಕುಮಾರ್ 14ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.