ಶಿವಮೊಗ್ಗ: ಕರ್ನಾಟಕ ತಂಡದ ವೇಗಿಗಳು ಇಲ್ಲಿನ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಸೋಮವಾರದ ದಿನದಾಟದಲ್ಲಿ ನಾಲ್ಕು ವಿಕೆಟ್ ಉರುಳಿಸಿ ಗೋವಾ ತಂಡಕ್ಕೆ ಆಘಾತ ನೀಡಿದ್ದಾರೆ.

ತಾಜಾ ವರದಿಯ ವೇಳೆಗೆ ಗೋವಾ 24 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದು, 309 ರನ್ ಹಿನ್ನಡೆಯಲ್ಲಿದೆ.

ಕರ್ನಾಟಕದ ಪರ ವಿದ್ವತ್ ಕಾವೇರಪ್ಪ ಹಾಗೂ ಅಭಿಲಾಷ್ ಶೆಟ್ಟಿ ತಲಾ ಎರಡು ವಿಕೆಟ್ ಗಳಿಸಿದ್ದಾರೆ.

ಗೋವಾದ ಸುಯಶ್ ಎಸ್.ಪ್ರಭುದೇಸಾಯಿ 12, ಸ್ನೇಹಲ್ ಕೌತಂಕರ್ 10 ಮತ್ತು ಅಭಿನವ್ ತೇಜ್ರಾಣಾ 18 ರನ್ ಗಳಿಸಿ ಔಟ್ ಆದರು. ಚಂಡೀಗಢ ವಿರುದ್ಧದ ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಅಭಿನವ್ ಇಲ್ಲಿ ವೈಫಲ್ಯ ಕಂಡರು.

ಈ ಮೊದಲು ಕರುಣ್ ನಾಯರ್ ಗಳಿಸಿದ ಅಮೋಘ ಶತಕದ (174*) ಬೆಂಬಲದೊಂದಿಗೆ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 371 ರನ್ ಪೇರಿಸಿತ್ತು. ಆದರೆ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆ ಉಂಟಾಗಿತ್ತು.
.ICC Womens WC: ಸೆಮೀಸ್ನಲ್ಲಿ ಭಾರತಕ್ಕೆ ಬಲಿಷ್ಠ ಆಸೀಸ್ ಸವಾಲು.ರಣಜಿ ಟ್ರೋಫಿ: ಗೋವಾ ಬೌಲರ್ಗಳ ಕಾಡಿದ ಕರುಣ್ ನಾಯರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.