ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಸುವೇದ್ ದ್ವಿಶತಕ ಮುಂಬೈ ಬೃಹತ್ ಮೊತ್ತ

Last Updated 7 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ನವಪ್ರತಿಭೆ ಸುವೇದ್ ಪಾರ್ಕರ್ ದ್ವಿಶತಕದ ಬಲದಿಂದ ಮುಂಬೈ ತಂಡವು ರಣಜಿ ಟ್ರೋಫಿ ಎಂಟರ ಘಟ್ಟದ ಪಂದ್ಯದ ಮೊದಲ ಇನಿಂಗ್ಸ್‌ನ ಲ್ಲಿ ಬೃಹತ್ ಮೊತ್ತ ದಾಖಲಿಸಿತು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ ಶತಕ ಗಳಿಸಿದ್ದ ಸುದೇವ್ ಎರಡನೇ ದಿನ ದ್ವಿಶತಕ ದಾಟಿದರು. 447 ಎಸೆತಗಳನ್ನು ಎದುರಿಸಿ 252 ರನ್‌ ಗಳಿಸಿದರು. ಇದರಿಂದಾಗಿ ಮುಂಬೈ ತಂಡವು ಉತ್ತರಾಖಂಡ ಎದುರಿನ ಪಂದ್ಯದಲ್ಲಿ 8 ವಿಕೆಟ್‌ಗಳಿಗೆ 647 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅದಕ್ಕುತ್ತರವಾಗಿ ಉತ್ತರಾಖಂಡ ತಂಡವು 11 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 39 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಆಲೂರು ಕ್ರೀಡಾಂಗಣ: ಮೊದಲ ಇನಿಂಗ್ಸ್– ಮುಂಬೈ: 166.4 ಓವರ್‌ಗಳಲ್ಲಿ 8ಕ್ಕೆ647 ಡಿಕ್ಲೇರ್ಡ್ (ಸುವೇದ್ ಪಾರ್ಕರ್ 252, ಸರ್ಫರಾಜ್ ಖಾನ್ 153, ಶಮ್ಸ್ ಮುಲಾನಿ 59, ತನುಷ್ ಕೋಟ್ಯಾನ್ 28, ತುಷಾರ್ ದೇಶಪಾಂಡೆ ಔಟಾಗದೆ 20, ಧಪೊಲಾ 89ಕ್ಕೆ3) ಉತ್ತರಾಖಂಡ: 11 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 39 (ಕಮಲ್ ಔಟಾಗದೆ 27, ಕುನಾಲ್ ಚಾಂಡೇಲಾ ಔಟಾಗದೆ 8)

ಮೊದಲ ಇನಿಂಗ್ಸ್: ಪಂಜಾಬ್: 71.3 ಓವರ್‌ಗಳಲ್ಲಿ 219, ಮಧ್ಯಪ್ರದೇಶ: 99 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 238 (ಯಶ್ ದುಬೆ 20, ಹಿಮಾಂಶು ಮಂತ್ರಿ 89, ಶುಭಂ ಶರ್ಮಾ ಔಟಾಗದೆ 102, ರಜತ್ ಪಾಟೀದಾರ್ ಔಟಾಗದೆ 20, ಮಯಂಕ್ ಮಾರ್ಕಂಡೆ 70ಕ್ಕೆ2)

ಜಸ್ಟ್ ಕ್ರಿಕೆಟ್ ಮೈದಾನ: ಮೊದಲ ಇನಿಂಗ್ಸ್: ಬಂಗಾಳ : 178 ಓವರ್‌ಗಳಲ್ಲಿ 5ಕ್ಕೆ577 (ಸುದೀಪ್ ಕುಮಾರ್ ಘರಮಿ 186, ಅನುಸ್ಟುಪ್ ಮಜುಂದಾರ್ 117, ಮನೋಜ್ ತಿವಾರಿ ಔಟಾಗದೆ 54, ಅಭಿಷೇಕ್ ಪೊರೆಲ್ 68, ಸುಶಾಂತ್ ಮಿಶ್ರಾ 122ಕ್ಕೆ2) ವಿರುದ್ಧ ಜಾರ್ಖಂಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT