ಶುಕ್ರವಾರ, ಏಪ್ರಿಲ್ 10, 2020
19 °C

ರಣಜಿ ಸೆಮಿಫೈನಲ್ | ಕರ್ನಾಟಕ ತಂಡಕ್ಕೆ ಬಂಗಾಳ, ಗುಜರಾತ್‌ಗೆ ಸೌರಾಷ್ಟ್ರ ಎದುರಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು: 2019–20ನೇ ಸಾಲಿನ ರಣಜಿ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ಗೆ ಗುಜರಾತ್‌, ಬಂಗಾಳ, ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳು ಪ್ರವೇಶ ಪಡೆದುಕೊಂಡಿವೆ.

ಮೊದಲ ಕ್ವಾರ್ಟರ್‌ ಫೈನಲ್‌ನ ವಿಜಯಿ ಗುಜರಾತ್‌ಗೆ ನಾಲ್ಕನೇ ಕ್ವಾರ್ಟರ್‌ನಲ್ಲಿ ಇನಿಂಗ್ಸ್‌ ಮುನ್ನಡೆ ಪಡೆದಿರುವ ಸೌರಾಷ್ಟ್ರ ಎದುರಾಗಲಿದೆ. ಈ ಪಂದ್ಯ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿದೆ.

ಇನ್ನೊಂದು ಸೆಮಿಫೈನಲ್‌ನಲ್ಲಿ, ಎರಡನೇ ಕ್ವಾರ್ಟರ್‌ಫೈನಲ್‌ನಲ್ಲಿ ಇನಿಂಗ್ಸ್‌ ಮುನ್ನಡೆ ಸಾಧಿಸಿರುವ ಬಂಗಾಳ ಮತ್ತು ಮೂರನೇ ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವು ಸಾಧಿಸಿರುವ ಕರ್ನಾಟಕ ಕಣಕ್ಕಿಳಿಯಲಿವೆ. ಈ ಪಂದ್ಯ ಕೋಲ್ಕತ್ತದಲ್ಲಿ ನಡೆಯಲಿವೆ. ಈ ಎರಡೂ ಪಂದ್ಯಗಳು ಫೆಬ್ರುವರಿ 29ರಿಂದ ಮಾರ್ಚ್‌ 04ರ ವರೆಗೆ ನಡೆಯಲಿವೆ.

ಕ್ವಾರ್ಟರ್‌ಫೈನಲ್‌ ಫಲಿತಾಂಶಗಳು
ಲೀಗ್‌ ಹಂತದಲ್ಲಿ ಎಲೈಟ್‌ ಎ ಮತ್ತು ಬಿ ಗುಂಪಿನ ಅಗ್ರಸ್ಥಾನಿ ಗುಜರಾತ್‌ ತಂಡ, ಪ್ಲೇಟ್‌ ಗುಂಪಿನ ಅಗ್ರಸ್ಥಾನಿ ಗೋವಾ ವಿರುದ್ಧ ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬರೋಬ್ಬರಿ 464 ರನ್‌ ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಸ್ಕೋರ್‌ ವಿವರ
ಗುಜರಾತ್‌: ಮೊದಲ ಇನಿಂಗ್ಸ್‌ 602ಕ್ಕೆ ಆಲೌಟ್ ಮತ್ತು ಎರಡನೇ ಇನಿಂಗ್ಸ್‌ 6 ವಿಕೆಟ್‌ ನಷ್ಟಕ್ಕೆ 199 ರನ್‌
ಗೋವಾ: ಮೊದಲ ಇನಿಂಗ್ಸ್‌ 173ಕ್ಕೆ ಮತ್ತು ಎರಡನೇ ಇನಿಂಗ್ಸ್‌ 164ಕ್ಕೆ ಆಲೌಟ್

ಬಂಗಾಳ ಹಾಗೂ ಒಡಿಶಾ ತಂಡಗಳ ನಡುವಣ ಎರಡನೇ ಕ್ವಾರ್ಟರ್‌ ಫೈನಲ್‌ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಬಂಗಾಳ 332 ರನ್‌ ಕಲೆಹಾಕಿತ್ತು. ಆದರೆ, ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಬಂಗಾಳ ಮುಂದಿನ ಹಂತಕ್ಕೆ ತಲುಪಿದೆ.

ಸ್ಕೋರ್‌ ವಿವರ
ಬಂಗಾಳ: ಮೊದಲ ಇನಿಂಗ್ಸ್‌ 332ಕ್ಕೆ ಆಲೌಟ್ ಮತ್ತು ಎರಡನೇ ಇನಿಂಗ್ಸ್‌ 373ಕ್ಕೆ ಆಲೌಟ್
ಒಡಿಶಾ: ಮೊದಲ ಇನಿಂಗ್ಸ್‌ 250ಕ್ಕೆ ಆಲೌಟ್ ಮತ್ತು ಎರಡನೇ ಇನಿಂಗ್ಸ್‌ ವಿಕೆಟ್ ನಷ್ಟವಿಲ್ಲದೆ 39ರನ್

ಮೂರನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ 167 ರನ್‌ ಅಂತರದ ಜಯ ಸಾಧಿಸಿದ ಕರ್ನಾಟಕ ತಂಡ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದೆ.

ಸ್ಕೋರ್‌ ವಿವರ
ಕರ್ನಾಟಕ: ಮೊದಲ ಇನಿಂಗ್ಸ್‌ 206ಕ್ಕೆ ಆಲೌಟ್ ಮತ್ತು ಎರಡನೇ ಇನಿಂಗ್ಸ್‌ 316ಕ್ಕೆ ಆಲೌಟ್
ಜಮ್ಮು ಕಾಶ್ಮೀರ: ಮೊದಲ ಇನಿಂಗ್ಸ್‌ 192ಕ್ಕೆ ಆಲೌಟ್ ಮತ್ತು ಎರಡನೇ ಇನಿಂಗ್ಸ್‌ 163ಕ್ಕೆ ಆಲೌಟ್

ಸೌರಾಷ್ಟ್ರ ಮತ್ತು ಆಂಧ್ರ ಪ್ರದೇಶ ನಡುವಣ ನಾಲ್ಕನೇ ಕ್ವಾರ್ಟರ್‌ ಫೈನಲ್‌ ಡ್ರಾನಲ್ಲಿ ಅಂತ್ಯವಾಯಿತು. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಸೌರಾಷ್ಟ್ರ ಸೆಮಿಗೆ ಲಗ್ಗೆ ಇಟ್ಟಿದೆ.

ಸ್ಕೋರ್‌ ವಿವರ
ಸೌರಾಷ್ಟ್ರ: ಮೊದಲ ಇನಿಂಗ್ಸ್‌ 419ಕ್ಕೆ ಆಲೌಟ್ ಮತ್ತು ಎರಡನೇ ಇನಿಂಗ್ಸ್‌ 426ಕ್ಕೆ ಆಲೌಟ್
ಆಂಧ್ರ ಪ್ರದೇಶ: ಮೊದಲ ಇನಿಂಗ್ಸ್‌ 136ಕ್ಕೆ ಆಲೌಟ್ ಮತ್ತು ಎರಡನೇ ಇನಿಂಗ್ಸ್‌ 149ಕ್ಕೆ 4 ವಿಕೆಟ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು