ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy: ತಮಿಳುನಾಡು 151 ರನ್‌ಗೆ ಆಲೌಟ್, ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

Published 11 ಫೆಬ್ರುವರಿ 2024, 6:42 IST
Last Updated 11 ಫೆಬ್ರುವರಿ 2024, 6:42 IST
ಅಕ್ಷರ ಗಾತ್ರ

ಚೆನ್ನೈ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಕರ್ನಾಟಕ ತಂಡ ರಣಜಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ಇಲ್ಲಿರುವ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ, ದೇವದತ್ತ ಪಡಿಕ್ಕಲ್‌ (151) ಗಳಿಸಿದ ಅಮೋಘ ಶತಕ ಮತ್ತು ಆರ್‌.ಸಮರ್ಥ್‌ (57), ಹಾರ್ದಿಕ್‌ ರಾಜ್‌ (51), ಎಸ್‌.ಸಮರ್ಥ್‌ ಅವರ ಉಪಯುಕ್ತ ಆಟದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 366 ರನ್‌ ಗಳಿಸಿತ್ತು.

ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ತಮಿಳುನಾಡು ತಂಡ, ಕರ್ನಾಟಕದ ಬೌಲರ್‌ ಎದುರು ದಿಟ್ಟ ಆಟವಾಡುವಲ್ಲಿ ವಿಫಲವಾಯಿತು. ಈ ತಂಡದ ಮೂವರು ಮಾತ್ರವೇ ಎರಡಂಕಿ ರನ್‌ ಗಳಿಸಿದರು. ಬಾಬಾ ಇಂದ್ರಜಿತ್‌ 48 ರನ್‌ ಗಳಿಸಿದರೆ, ಎನ್‌.ಜಗದೀಶನ್‌ 40 ರನ್‌ ಕಲೆಹಾಕಿದರು. ಇವರಿಬ್ಬರ ಬಳಿಕ ವಿಮಲ್‌ ಕುಮಾರ್‌ ಗಳಿಸಿದ 14 ರನ್‌, ತಂಡದ ಪರ ಮೂರನೇ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.

ಹೀಗಾಗಿ, ತಮಿಳುನಾಡು ತಂಡದ ಇನಿಂಗ್ಸ್‌ 151 ರನ್‌ ಗಳಿಸುವಷ್ಟರಲ್ಲೇ ಮುಕ್ತಾಯವಾಯಿತು. ಇದರೊಂದಿಗೆ ಮಯಂಕ್‌ ಅಗರವಾಲ್‌ ಪಡೆಗೆ 215 ರನ್‌ಗಳ ಮುನ್ನಡೆ ಲಭಿಸಿದೆ.

ಕರ್ನಾಟಕ ಪರ ವೈಶಾಕ್‌ ವಿಜಯ್‌ ಕುಮಾರ್, ಶಶಿ ಕುಮಾರ್, ಹಾರ್ದಿಕ್‌ ರಾಜ್‌ ಮತ್ತು ವಿದ್ವತ್ ಕಾವೇರಪ್ಪ ಕ್ರಮವಾಗಿ 4, 3, 2 ಹಾಗೂ 1 ವಿಕೆಟ್‌ ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT