ಶಬ್ದಭೇದಿ ನಿಲ್ಲಿಸಿ: ಮಾಂಜ್ರೆಕರ್‌ಗೆ ರವೀಂದ್ರ ಜಡೇಜ ತಿರುಗೇಟು

ಗುರುವಾರ , ಜೂಲೈ 18, 2019
28 °C

ಶಬ್ದಭೇದಿ ನಿಲ್ಲಿಸಿ: ಮಾಂಜ್ರೆಕರ್‌ಗೆ ರವೀಂದ್ರ ಜಡೇಜ ತಿರುಗೇಟು

Published:
Updated:
Prajavani

ಲಂಡನ್: ವೀಕ್ಷಕ ವಿವರಣೆಕಾರ, ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅವರ ಹೇಳಿಕೆಗಳಿಗೆ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಖಾರವಾಗಿ ತಿರುಗೇಟು ನೀಡಿದ್ದಾರೆ.

‘ನೀವು ಆಡಿರುವ ಪಂದ್ಯಗಳಿಗಿಂತ ದುಪ್ಟಟ್ಟು ಸಂಖ್ಯೆಯ ಪಂದ್ಯಗಳಲ್ಲಿ  ಆಡಿದ್ದೇನೆ. ಬೇರೆಯವರ ಪರಿಶ್ರಮ ಮತ್ತು ಪ್ರತಿಭೆಯಿಂದ ಸಾಧನೆ ಮಾಡಿದವರನ್ನು ಗೌರವಿಸುವುದನ್ನು ಕಲಿಯಿತು. ನಿಮ್ಮ ಶಬ್ದಭೇದಿಯನ್ನು ಕೇಳಿ ಸಾಕಾಗಿದೆ’ ಎಂದು ಜಡೇಜ ಟ್ವೀಟ್ ಮಾಡಿದ್ದಾರೆ. ಅವರನ್ನು ಬೆಂಬಲಿಸಿ ಹಲವಾರು ಜನರು ಪ್ರತಿಕ್ರಿಯಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಣದ ಪಂದ್ಯದ ಸಂದರ್ಭದಲ್ಲಿ ಮಾಂಜ್ರೇಕರ್ ತಮ್ಮ ಕಾಮೆಂಟ್ರಿಯಲ್ಲಿ, ‘ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಸದ್ಯ 50 ಓವರ್‌ಗಳ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜ ಅದೇ ತರಹ ಇದ್ದಾರೆ. ಟೆಸ್ಟ್ ಕ್ರಿಕೆಟ್‌ ಅವರು ಅಪ್ಪಟ ಬೌಲರ್. ಆದರೆ ಏಕದಿನ ಕ್ರಿಕೆಟ್‌ನಲ್ಲಿ ನಾನು ತಂಡದಲ್ಲಿ ಸ್ಪಿನ್ನರ್‌ಗಿಂತ ಬ್ಯಾಟ್ಸ್‌ಮನ್‌ ಗೆ ಆದ್ಯತೆ ನೀಡುತ್ತೇನೆ’ ಎಂದು ವ್ಯಂಗ್ಯವಾಡಿದ್ದರು. ಅಲ್ಲದೇ ಮಹೇಂದ್ರಸಿಂಗ್ ಧೋನಿಯ ಆಟದ ಬಗ್ಗೆಯೂ ಸಂಜಯ್ ಕೆಲವು ಟ್ವೀಟ್‌ಗಳನ್ನು ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !