ಮಂಗಳವಾರ, ಮಾರ್ಚ್ 21, 2023
20 °C

ಆರ್‌ಸಿಬಿ ಮುಖ್ಯಸ್ಥರಾಗಿ ಪ್ರಥಮೇಶ್ ಮಿಶ್ರಾ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್‌  ಮುಖ್ಯಸ್ಥರಾಗಿ ಪ್ರಥಮೇಶ್ ಮಿಶ್ರಾ ನೇಮಕವಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಡಿಯಾಜಿಯೊ ಇಂಡಿಯಾದಲ್ಲಿ   ಮುಖ್ಯ ವಾಣಿಜ್ಯಾಧಿಕಾರಿಯಾಗಿದ್ದ ಮಿಶ್ರಾ ಅವರಿಗೆ ಹೆಚ್ಚುವರಿಯಾಗಿ ಫ್ರಾಂಚೈಸಿ ಮುಖಸ್ಥರ ಹೊಣೆಯನ್ನೂ ನೀಡಲಾಗಿದೆ. 

ಆನಂದ್ ಕೃಪಾಳು ಅವರ ಅಧಿಕಾರವಧಿ ಮುಗಿದಿದ್ದು ಆ ಸ್ಥಾನಕ್ಕೆ ಮಿಶ್ರಾ ನೇಮಕವಾಗಿದ್ದಾರೆ.

‘ತಂಡದ ನಾಯಕ ವಿರಾಟ್ ಕೊಹ್ಲಿ, ಕೋಚ್ ಮೈಕ್ ಹೆಸನ್ ಮತ್ತು ಸೈಮನ್ ಕ್ಯಾಟಿಚ್ ಅವರೊಂದಿಗೆ ಕಾರ್ಯನಿರ್ವಹಿಸಲು ಉತ್ಸುಕನಾಗಿದ್ದೇನೆ. ಆನಂದ್ ಅವರು ಇದುವರೆಗೆ ಸಂಸ್ತೆಗೆ ಉತ್ತಮ ಕಾಣಿಕೆ ನೀಡಿದ್ದಾರೆ. ಅವರ ಮಾರ್ಗದರ್ಶನಕ್ಕೆ ಆಭಾರಿಯಾಗಿದ್ದೇನೆ‘ ಎಂದು ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ... ಯೂರೊ ಕಪ್ ಫುಟ್‌ಬಾಲ್ ಟೂರ್ನಿ: ಸ್ಪೇನ್‌–ಸ್ವಿಟ್ಜರ್ಲೆಂಡ್‌ಗೆ ಸೆಮಿಫೈನಲ್‌ ಕನಸು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.