ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ವಿಶ್ವಕಪ್‌ ಪಂದ್ಯಗಳನ್ನು 40 ಓವರ್‌ಗಳಿಗೆ ಇಳಿಸಬೇಕು: ರವಿ ಶಾಸ್ತ್ರಿ

Last Updated 12 ಮಾರ್ಚ್ 2023, 23:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯ ಪಂದ್ಯಗಳ ಓವರ್‌ಗಳ ಸಂಖ್ಯೆಯನ್ನು 40ಕ್ಕೆ ಸೀಮಿತಗೊಳಿಸಬೇಕು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರವಿ ಶಾಸ್ತ್ರಿ ಅವರು ಸಲಹೆ ನೀಡಿದ್ದಾರೆ.

‘ಏಕದಿನ ಕ್ರಿಕೆಟ್‌ ಬದುಕುಳಿಯಬೇಕಾದರೆ ಓವರ್‌ಗಳ ಸಂಖ್ಯೆಯನ್ನು 50 ರಿಂದ 40ಕ್ಕೆ ಕಡಿತಗೊಳಿಸಬೇಕು’ ಎಂದು ಅವರು ಭಾನುವಾರ ಅಭಿಪ್ರಾಯಪಟ್ಟರು.

‘1983 ರಲ್ಲಿ ನಾವು ವಿಶ್ವಕಪ್‌ ಗೆದ್ದಾಗ ಪ್ರತಿ ಇನಿಂಗ್ಸ್‌ನಲ್ಲಿ ಓವರ್‌ಗಳ ಸಂಖ್ಯೆ 60 ಇತ್ತು. ಜನರು ಆಸಕ್ತಿ ಕಳೆದುಕೊಳ್ಳತೊಡಗಿದಾಗ ಓವರ್‌ಗಳನ್ನು 50ಕ್ಕೆ ಕಡಿತಗೊಳಿಸಲಾಯಿತು. ಓವರ್‌ಗಳ ಸಂಖ್ಯೆಯನ್ನು 50 ರಿಂದ 40ಕ್ಕೆ ಕಡಿತಗೊಳಿಸುವ ಕಾಲ ಈಗ ಕೂಡಿಬಂದಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT