ಲೀಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಮತ್ತೆ ಸುದಿಯಲ್ಲಿದ್ದಾರೆ.

ಮೊದಲು ಅಮೋಘ ಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದ ಪಂತ್, ಮೂರನೇ ದಿನದಾಟದಲ್ಲಿ ವಿಕೆಟ್ ಕೀಪಿಂಗ್ ವೇಳೆ ಅಂಪೈರ್ ಜತೆ ತೋರಿದ ಅನುಚಿತ ವರ್ತನೆಗಾಗಿ ನಿಷೇಧದ ಭೀತಿ ಎದುರಿಸುತ್ತಿದ್ದಾರೆ.

ದಿನದಾಟದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಚೆಂಡನ್ನು ಬದಲಿಸಲು ರಿಷಭ್ ಬಯಸಿದ್ದರು. ಆದರೆ ಚೆಂಡನ್ನು ಪರಿಶೀಲಿಸಿದ ಅಂಪೈರ್ ಬದಲಿಸಲು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ಪಂತ್ ಚೆಂಡನ್ನು ಬಲವಾಗಿ ನೆಲಕ್ಕೆ ಎಸೆದಿದ್ದಾರೆ.

ಅಂಪೈರ್ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ಆಕ್ರೋಶ ವ್ಯಕ್ತಪಡಿಸಿರುವ ಪಂತ್ ಅವರಿಂದ ಐಸಿಸಿ ನಿಯಮ ಉಲ್ಲಂಘನೆಯಾಗಿದೆ ಎಂಬ ಕುರಿತು ವರದಿಗಳು ಬಂದಿವೆ. ಈ ಸಂಬಂಧ ಅಧಿಕೃತವಾಗಿ ಯಾವುದೇ ಸ್ಪಷ್ಟನೆಗಳು ಬಂದಿಲ್ಲ.

ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 96 ರನ್ಗಳ ಮುನ್ನಡೆಯಲ್ಲಿದೆ.
.ಶ್ರೇಷ್ಠ ತಯಾರಿಯನ್ನೇ ನಡೆಸುತ್ತೇನೆ: ಟೀಕಾಕಾರರಿಗೆ ಬೂಮ್ರಾ ತಿರುಗೇಟು.ENG vs IND Test | ಜಸ್ಪ್ರೀತ್ ಬೂಮ್ರಾ ವಿಕೆಟ್ ಸಂಭ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.