ನವದೆಹಲಿ: ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವಷ್ಟು ಸಾಮರ್ಥ್ಯ ಇನ್ನೂ ತಮಗೆ ಇದೆ. ಭಾರತ ತಂಡಕ್ಕೆ ಇವತ್ತು ಅಗತ್ಯವಿರುವ ಫಿನಿಷರ್ ಪಾತ್ರವನ್ನು ನಾನು ನಿರ್ವಹಿಸಬಲ್ಲೆ ಎಂದು ಕರ್ನಾಟಕದ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2007ರಲ್ಲಿ ಭಾರತವು ಮೊದಲ ಟಿ20 ವಿಶ್ವಕಪ್ ಗೆದ್ದಾಗ ರಾಬಿನ್ ತಂಡದಲ್ಲಿದ್ದರು. 2015ರ ಜುಲೈನಲ್ಲಿ ರಾಬಿನ್ ಭಾರತ ತಂಡದಲ್ಲಿ ಆಡಿದ್ದು ಕೊನೆ ನಂತರ ಅವರಿಗೆ ಮತ್ತೆ ಅವಕಾಶ ಸಿಕ್ಕಿಲ್ಲ. 2011ರಿಂದ ಈಚೆಗೆ ಅವರು ಎಂಟು ಅಂತರರಾಷ್ಟ್ರೀಯ ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

‘ಭಾರತ ತಂಡಕ್ಕೆ ಪ್ರತಿ ಪಂದ್ಯಗಳಲ್ಲಿಯೂ ಫಿನಿಷರ್ ಕೊರತೆ ಕಾಣುತ್ತಿದೆ. ಆ ಪಾತ್ರಕ್ಕೆ ಸಿದ್ಧವಾಗಲು ಎಲ್ಲ ತಯಾರಿಯನ್ನೂ ನಾನು ಮಾಡಿಕೊಳ್ಳುತ್ತಿದ್ದೇನೆ. ಅದಕ್ಕಾಗಿ ಕಠಿಣ ತಾಲೀಮು ಮಾಡುತ್ತಿದ್ದೇನೆ. ದಿನದಿಂದ ದಿನಕ್ಕೆ ನನ್ನ ಕೌಶಲ್ಯ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದೇನೆ’ ಎಂದು ಕೊಡಗಿನ ರಾಬಿನ್ ಹೇಳಿದ್ದಾರೆ.

‘ನನ್ನಲ್ಲಿ ಇವತ್ತಿಗೂ ಅಂತರರಾಷ್ಟ್ರೀಯಮಟ್ಟದಲ್ಲಿ ಆಡುವ ಚೈತನ್ಯ ಖಂಡಿತವಾಗಿಯೂ ಇದೆ. ಕಠಿಣ ಸ್ಪರ್ಧೆಯನ್ನು ಎದುರಿಸಿ ತಂಡ ಸೇರಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದೇನೆ’ ಎಂದು ಇಎಸ್ಪಿಎನ್ಕ್ರಿಕ್ಇನ್ಫೊಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಅದೃಷ್ಟದೇವತೆ ಅಥವಾ ದೇವರ ದಯೆ, ಆಶಿರ್ವಾದ ಅಥವಾ ಏನಾದರೂ ಆನ್ನಿ. ಅದು ಒಲಿದರೆ ನನ್ನ ಶ್ರಮ ಸಾರ್ಥಕವಾಗುತ್ತದೆ. ಯಾವತ್ತಿಗೂ ನನ್ನ ಪ್ರಯತ್ನವನ್ನು ಕೈಬಿಟ್ಟಿಲ್ಲ. ಸತತ ಪ್ರಯತ್ನ ಮಾಡುತ್ತಲೇ ಇದ್ದೇನೆ’ ಎಂದು 34 ವರ್ಷದ ರಾಬಿನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.