ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಮಂಗಳವಾರ ನೆಟ್ಸ್ನಲ್ಲಿ ಬಹಳ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಬೇರೆ ಬೇರೆ ಬೌಲರ್ಗಳು ಹಾಗೂ ಥ್ರೋಡೌನ್ ಪರಿಣತರು ಪ್ರಯೋಗಿಸಿದ ಎಸೆತಗಳನ್ನು ಸುರಳಿತವಾಗಿ ಎದುರಿಸಿದರು. ಇದರೊಂದಿಗೆ ತಾವು ಗಾಯಮುಕ್ತರಾಗಿರುವ ಸೂಚನೆಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ರೋಹಿತ್, ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಉಪನಾಯಕ ಜಸ್ಪ್ರೀತ್ ಬೂಮ್ರಾ ಅವರು ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಸಮೀಕ್ಷೆ ನಡೆಸಿದರು. ಇದೇ 26ರಿಂದ ಆರಂಭವಾಗಲಿರುವ ಬಾರ್ಡರ್–ಗಾವಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ನಿಗದಿಯಾಗಿರುವ ಪಿಚ್ ಅನ್ನು ಬಹಳಷ್ಟು ಹೊತ್ತು ಅವಲೋಕಿಸಿದ ಅವರು ದೀರ್ಘ ಸಮಾಲೋಚನೆ ನಡೆಸಿದ್ದು ಕಂಡುಬಂದಿತು.

ಪಂದ್ಯದ ಮೊದಲ ದಿನವಾದ ಗುರುವಾರ ಬಿಸಿಗಾಳಿಗೆ ಪಿಚ್ ಬೇಗನೆ ಶುಷ್ಕವಾಗಬಹುದು. ಅದರಿಂದಾಗಿ ಸ್ಪಿನ್ನರ್ಗಳನ್ನು ಬೇಗನೆ ಬೌಲಿಂಗ್ಗೆ ಇಳಿಸುವ ಸಾಧ್ಯತೆ ಇದೆ. ಅದರಿಂದಾಗಿ ರೋಹಿತ್ ಅವರು ತಂಡಕ್ಕೆ ಇಬ್ಬರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಬಹುದು.

‘ನಾನು ಪಿಚ್ ನೋಡಿದೆ. ಅದರ ಮೇಲೆ ಸ್ವಲ್ಪ ಮಟ್ಟಿಗೆ ಹುಲ್ಲು ಆವರಿಸಿದೆ. ವಾತಾವರಣವನ್ನೂ ಗಮನದಲ್ಲಿಟ್ಟುಕೊಳ್ಳುತ್ತೇವೆ. ಎಲ್ಲ ಅಂಶಗಳನ್ನೂ ಪರಿಶೀಲಿಸಿ ತಂಡ ಸಂಯೋಜನೆ ನಿರ್ಣಯಿಸುತ್ತೇವೆ. ಇಲ್ಲಿಯ ಸ್ಥಿತಿಗನುಗುಣವಾಗಿ 11 ಆಟಗಾರರ ಉತ್ತಮ ಸಂಯೋಜನೆಯನ್ನೇ ಆಯ್ಕೆ ಮಾಡಲಾಗುವುದು’ ಎಂದು ರೋಹಿತ್ ಸುದ್ದಿಗಾರರಿಗೆ ಹೇಳಿದರು.

ತಂಡವು ಶನಿವಾರ, ಭಾನುವಾರ ಮತ್ತು ಮಂಗಳವಾರ ಕಡ್ಡಾಯ ತಾಲೀಮು ನಡೆಸಿದವು. ಬುಧವಾರ ಐಚ್ಛಿಕ ಅಭ್ಯಾಸ ದಿನವಾಗಿದೆ.

ಶಾಂತವಾಗಿರಿ, ಮುಂದೆ ಸಾಗಿ: ರೋಹಿತ್

ಅಸ್ಥಿರ ಲಯದಲ್ಲಿರುವ ತಮ್ಮ ತಂಡದ ಯುವ ಬ್ಯಾಟರ್ಗಳಿಗೆ ನಾಯಕ ರೋಹಿತ್ ಅವರು, ‘ಶಾಂತವಾಗಿರಿ. ಮುಂದೆ ಸಾಗುತ್ತಿರಿ’ ಎಂದು ಕಿವಿಮಾತು ಹೇಳಿದ್ದಾರೆ.

ಮೊದಲ ಪಂದ್ಯದಲ್ಲಿ 161 ರನ್ ಹೊಡೆಯುವ ಮೂಲಕ ಗಮನ ಸೆಳೆದಿದ್ದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಹಾಗೂ ಶುಭಮನ್ ಗಿಲ್ ಅವರು ಕಳೆದೆರಡು ಟೆಸ್ಟ್ಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಡಿಲ್ಲ. ಸ್ವತಃ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರೂ ಫಾರ್ಮ್ ಕೊರತೆ ಎದುರಿಸುತ್ತಿದ್ದಾರೆ. ಅಗ್ರಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ ಮತ್ತು ಕೆಳಮಧ್ಯಮ ಕ್ರಮಾಂಕದಲ್ಲಿ ನಿತೀಶ ಕುಮಾರ ರೆಡ್ಡಿ ಮಾತ್ರ ಸ್ಥಿರವಾದ ಲಯ ಹೊಂದಿದ್ದಾರೆ.

‘ಈ ಎಲ್ಲ ಹುಡುಗರು, ಗಿಲ್ ಜೈಸ್ವಾಲ್ ಮತ್ತು ಪಂತ್ ಅವರು ಒಂದೇ ದೋಣಿಯ ಪಯಣಿಗರು. ಅವರಿಗೆ ತಮ್ಮ ಸಾಮರ್ಥ್ಯದ ಕುರಿತು ಚೆನ್ನಾಗಿ ಅರಿವಿದೆ. ಈ ವಿಷಯವನ್ನು ನಾವು ಜಟಿಲಗೊಳಿಸುವುದು ಬೇಡ. ಅವರಿಂದ ತಂಡಕ್ಕೆ ಏನು ನಿರೀಕ್ಷೆ ಇದೆ ಎಂದೂ ಗೊತ್ತಿದೆ. ಈ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲವೆನಿಸುತ್ತದೆ. ಇದರಿಂದ ಅವರ ಮನೋಸ್ಥಿತಿಯನ್ನು ಗೊಂದಲಕ್ಕೀಡು ಮಾಡುವುದು ಸಲ್ಲ’ ಎಂದು ರೋಹಿತ್ ಅಭಿಪ್ರಾಯಪಟ್ಟರು.

ಜೈಸ್ವಾಲ್ ಅವರು ಪರ್ತ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಶತಕ ಗಳಿಸಿದ್ದು ಬಿಟ್ಟರೆ ಉಳಿದ ನಾಲ್ಕು ಇನಿಂಗ್ಸ್ಗಳಲ್ಲಿ ಒಂದಂಕಿ ಗಳಿಸಿದ್ದಾರೆ.

‘ಜೈಸ್ವಾಲ್ ಅವರು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದಾರೆ. ಅವರು ತಾವೇನು ಮಾಡಬಲ್ಲರು ಎಂಬುದನ್ನು ಈಗಾಗಲೇ ತೋರಿಸಿದ್ದಾರೆ. ಅವರಿಗೆ ಅಪಾರವಾದ ಪ್ರತಿಭೆ ಇದೆ. ಅಂತಹ ಆಟಗಾರನಿಗೆ ಮಾನಸಿಕವಾಗಿ ಹೆಚ್ಚು ಒತ್ತಡ ಹಾಕುವ ಅಗತ್ಯವಿಲ್ಲ’ ಎಂದರು.

‘ಗಿಲ್ ಉತ್ತಮ ಗುಣಮಟ್ಟ ಹೊಂದಿರುವ ಆಟಗಾರ. ಅವರ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಮುಂದುವರಿಯಬೇಕು. ರಿಷಭ್ ಪಂತ್ ಒತ್ತಡದಲ್ಲಿ ಇಲ್ಲ. ಅವರು ಇಲ್ಲಿ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಉತ್ತಮ ಲಯದಲ್ಲಿದ್ದಾರೆ. ಎರಡ್ಮೂರು ಪಂದ್ಯಗಳಲ್ಲಿ ಅವರ ಆಟ ನೋಡಿ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲ. ಅವರಿಗೆ ತಾವೇನು ಮಾಡಬೇಕು ಎಂದು ಗೊತ್ತಿದೆ’ ಎಂದು ರೋಹಿತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.