ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್ ಶರ್ಮಾ- ರಿತಿಕಾ ದಂಪತಿಗೆ ಹೆಣ್ಣು ಮಗು ಜನನ

Last Updated 31 ಡಿಸೆಂಬರ್ 2018, 10:56 IST
ಅಕ್ಷರ ಗಾತ್ರ

ಮುಂಬೈ: ಕ್ರಿಕೆಟಿಗ ರೋಹಿತ್ ಶರ್ಮಾ- ರಿತಿಕಾ ದಂಪತಿಗಳಿಗೆ ಭಾನುವಾರಹೆಣ್ಣು ಮಗು ಜನಿಸಿದೆ.ಮುಂಬೈನಲ್ಲಿ ಮಗು ಜನಿಸಿದ್ದು ರಿತಿಕಾಳ ಸಂಬಂಧಿ ಸೀಮಾ ಖಾನ್ ಇನ್‍ಸ್ಟಾಗ್ರಾಂನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

2015 ಡಿಸೆಂಬರ್ 13ರಂದು ರೋಹಿತ್- ರಿತಿಕಾ ಸಜ್ದೆ ಅವರನ್ನುಮದುವೆಯಾಗಿದ್ದರು.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದಸ್ಯರಾಗಿರುವ ರೋಹಿತ್, ಮಗು ಜನಿಸಿದ ಸುದ್ದಿ ತಿಳಿದೊಡನೆ ಮುಂಬೈಗೆ ವಾಪಸಾಗಿದ್ದಾರೆ.ಹಾಗಾಗಿ ಜನವರಿ 3 ರಂದು ಸಿಡ್ನಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ರೋಹಿತ್ ಆಡುವುದಿಲ್ಲ. ರೋಹಿತ್ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ಅವರಿಗೆ ಅವಕಾಶ ನೀಡುವ ಬಗ್ಗೆ ಟೀಂ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT