ಶನಿವಾರ, ಜನವರಿ 18, 2020
20 °C

ಜಯಸೂರ್ಯ ದಾಖಲೆ ಮುರಿದ ರೋಹಿತ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಟಕ್: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಶ್ರೀಲಂಕಾದ ಸನತ್ ಜಯಸೂರ್ಯ ಅವರು 22 ವರ್ಷಗಳ ಹಿಂದೆ ಮಾಡಿದ್ದ ದಾಖಲೆಯನ್ನು ಭಾನುವಾರ ಮುರಿದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಒಂದೇ ವರ್ಷದ ಅವಧಿಯಲ್ಲಿ (2019) ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು. ಅವರು ಈ ವರ್ಷದಲ್ಲಿ ಒಟ್ಟು 2442 ರನ್‌ಗಳನ್ನು ಪೇರಿಸಿದರು. 1997ರಲ್ಲಿ ಜಯಸೂರ್ಯ ಅವರು 2387 ರನ್‌ಗಳನ್ನು ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಈ ವರ್ಷದಲ್ಲಿ ರೋಹಿತ್ ಹತ್ತು ಶತಕ ಮತ್ತು ಅಷ್ಟೇ ಸಂಖ್ಯೆಯ ಅರ್ಧಶತಕಗಳನ್ನು ಗಳಿಸಿದ್ದಾರೆ. 47 ಇನಿಂಗ್ಸ್‌ಗಳಿಂದ  53.08ರ ಸರಾಸರಿಯಲ್ಲಿ ರನ್‌ ಪೇರಿಸಿದ್ದಾರೆ. ಕಟಕ್‌ನಲ್ಲಿ ವಿಂಡೀಸ್ ಎದುರಿನ ಪಂದ್ಯದಲ್ಲಿ ಶೇಲ್ಡನ್ ಕಾಟ್ರೆಲ್‌ ಎಸೆತವೊಂದರಲ್ಲಿ ಒಂದು ರನ್ ಗಳಿಸಿದ ರೋಹಿತ್ ಸನತ್ ದಾಖಲೆಯನ್ನು ದಾಟಿದರು. ಈ ಪಂದ್ಯದಲ್ಲಿ ಅವರು 63 ರನ್‌ ಗಳಿಸಿದರು. 2008ರಲ್ಲಿ ವೀರೇಂದ್ರ ಸೆಹ್ವಾಗ್ (2355 ರನ್), 2003ರಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ (2349 ರನ್) ಅವರೂ ಇಂತಹ ಸಾಧನೆ ಮಾಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು