ಮಂಗಳವಾರ, ಮಾರ್ಚ್ 2, 2021
21 °C
ರಾಜಸ್ಥಾನ ರಾಯಲ್ಸ್‌ಗೆ ಸಂಜು ನಾಯಕ; ಸ್ಮಿತ್ ಬಿಡುಗಡೆ

RCB Players: ಆರ್‌ಸಿಬಿಯಲ್ಲಿ ಉಳಿದ ಪಡಿಕ್ಕಲ್, 10 ಆಟಗಾರರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗ ಆಟಗಾರರಾದ ದೇವದತ್ತ ಪಡಿಕ್ಕಲ್ ಮತ್ತು ವವನ್ ದೇಶಪಾಂಡೆ ಅವರನ್ನು ಉಳಿಸಿಕೊಳ್ಳಲಾಗಿದೆ.

ಮಧ್ಯಮವೇಗಿ ಉಮೇಶ್ ಯಾದವ್, ಕ್ರಿಸ್ ಮೊರಿಸ್ ಮತ್ತು  ಆ್ಯರನ್ ಫಿಂಚ್ ಸೇರಿದಂತೆ 10 ಆಟಗಾರರನ್ನು ಬಿಡುಗಡೆ ಮಾಡಿದೆ.

ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದಲ್ಲಿದ್ದ ಕರ್ನಾಟಕದ ಕರುಣ್ ನಾಯರ್, ಕೃಷ್ಣಪ್ಪ ಗೌತಮ್ ಮತ್ತು ಜೆ. ಸುಚಿತ್ ಅವರನ್ನು ಬಿಡುಗಡೆ ಮಾಡಲಾಗಿದೆ.  ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದ ಸ್ಟೀವನ್ ಸ್ಮಿತ್ ಅವರನ್ನೂ ಕೈಬಿಡಲಾಗಿದೆ. ತಂಡಕ್ಕೆ ಕೇರಳದ ಆಟಗಾರ ಸಂಜು ಸ್ಯಾಮ್ಸನ್ ನಾಯಕರಾಗಿದ್ಧಾರೆ. ಚೆನ್ನೈ ತಂಡದಲ್ಲಿ ಸುರೇಶ್ ರೈನಾ ಮುಂದುವರಿದಿದ್ದಾರೆ. ಹರಭಜನ್ ಸಿಂಗ್ ಬಿಡುಗಡೆಗೊಂಡಿದ್ದಾರೆ.

 ಬಿಡುಗಡೆಗೊಂಡ ಆಟಗಾರರು;

* ಆರ್‌ಸಿಬಿ:  ಕ್ರಿಸ್ ಮೋರಿಸ್, ಆ್ಯರನ್ ಫಿಂಚ್, ಮೋಯಿನ್ ಅಲಿ, ಇಸುರು ಉಡಾನ, ಡೇಲ್ ಸ್ಟೇಯ್ನ್, ಶಿವಂ ದುಬೆ, ಉಮೇಶ್ ಯಾದವ್, ಪವನ್ ನೇಗಿ, ಗುರುಕೀರತ್ ಮಾನ್, ಪಾರ್ಥಿವ್ ಪಟೇಲ್. 

ಪರ್ಸ್ ಮೌಲ್ಯ: ₹ 35.7 ಕೋಟಿ

* ಚೆನ್ನೈಸೂಪರ್ ಕಿಂಗ್ಸ್:  ಶೇನ್ ವಾಟ್ಸನ್, ಮುರಳಿ ವಿಜಯ್, ಕೇದಾರ್ ಜಾಧವ್, ಹರಭಜನ್ ಸಿಂಗ್, ಪೀಯೂಷ್ ಚಾವ್ಲಾ, ಮೋನು ಸಿಂಗ್

ಪರ್ಸ್ ಮೌಲ್ಯ: ₹ 22.9 ಕೋಟಿ

ರಾಜಸ್ಥಾನ್ ರಾಯಲ್ಸ್: ಸ್ಟೀವ್ ಸ್ಮಿತ್, ಅಂಕಿತ್ ರಜಪೂತ್, ಒಷೇನ್ ಥಾಮಸ್, ಆಕಾಶ್ ಸಿಂಗ್, ವರುಣ್ ಆ್ಯರನ್, ಟಾಮ್ ಕರನ್, ಅನಿರುದ್ಧ ಜೋಶಿ, ಶಶಾಂಕ್ ಸಿಂಗ್

ಪರ್ಸ್: ₹ 34.85ಕೋಟಿ

* ಡೆಲ್ಲಿ ಕ್ಯಾಪಿಟಲ್ಸ್: ಮೋಹಿತ್ ಶರ್ಮಾ, ತುಷಾರ್ ದೇಶಪಾಂಡೆ, ಕೀಮೊ ಪಾಲ್, ಸಂದೀಪ್ ಲಾಮಿಚಾನೆ, ಅಲೆಕ್ಸ್ ಕ್ಯಾರಿ, ಜೇಸನ್ ರಾಯ್

ಪರ್ಸ್: ₹ 12.8 ಕೋಟಿ

* ಸನ್‌ರೈಸರ್ಸ್‌ ಹೈದರಾಬಾದ್: ಬಿಲ್ಲಿ ಸ್ಟಾನ್‌ಲೇಕ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ಬಿ. ಸಂದೀಪ್, ವೈ ಪಾರ್ಥಿವ್ ರಾಜ್.

ಪರ್ಸ್: ₹ 10.75 ಕೋಟಿ

* ಕಿಂಗ್ಸ್ ಇಲೆವನ್ ಪಂಜಾಬ್: ಗ್ಲೆನ್ ಮ್ಯಾಕ್ಸ್‌ವೆಲ್, ಶೆಲ್ಡನ್ ಕಾಟ್ರೇಲ್, ಕೆ. ಗೌತಮ್, ಮುಜೀಬ್ ಉರ್ ರೆಹಮಾನ್, ಜಿಮ್ಮಿ ನಿಶಾಮ್, ಹಾರ್ಡಸ್ ವಿಜೊಯನ್, ಕರುಣ್ ನಾಯರ್, ಜೆ. ಸುಚಿತ್, ತೆಜಿಂದರ್ ಸಿಂಗ್

ಪರ್ಸ್: ₹ 53.2 ಕೋಟಿ

* ಮುಂಬೈ ಇಂಡಿಯನ್ಸ್: ಲಸಿತ್ ಮಾಲಿಂಗ, ನೇಥನ್ ಕೌಲ್ಟರ್‌ನೈಲ್, ಜೇಮ್ಸ್ ಪ್ಯಾಟಿನ್ಸನ್, ಶೆರ್ಪೆನ್ ರುದರ್‌ಫೋರ್ಡ್, ಮಿಚೆಲ್ ಮೆಕ್ಲೆಂಗಾನ್, ದಿಗ್ವಿಜಯ್ ದೇಶಮುಖ, ಪ್ರಿನ್ಸ್‌ ಬಲವಂತ್ ರಾಯ್

ಪರ್ಸ್: ₹ 15.35 ಕೋಟಿ

* ಕೋಲ್ಕತ್ತ ನೈಟ್‌ರೈಡರ್ಸ್: ನಿಖಿಲ್ ನಾಯಕ್, ಸಿದ್ಧೇಶ್ ಲಾಡ್, ಎಂ. ಸಿದ್ಧಾರ್ಥ್, ಟಾಮ್ ಬ್ಯಾಂಟನ್, ಕ್ರಿಸ್ ಗ್ರೀನ್, ಹ್ಯಾರಿ ಗರ್ನಿ

ಪರ್ಸ್: ₹ 10.85 ಕೋಟಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು