ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನ ಗೇಟ್‌ಗಳಿಗೆ ಸಚಿನ್‌–ಲಾರಾ ಹೆಸರು

ಲಾರಾ-ತೆಂಡೂಲ್ಕರ್ ಗೇಟ್‌ನಲ್ಲಿ, ಈ ಇಬ್ಬರು ದಂತಕಥೆಗಳ ಸಾಧನೆಗಳು ಮತ್ತು ಸಿಡ್ನಿ ಮೈದಾನದಲ್ಲಿ ಅವರ ಅಂಕಿಅಂಶಗಳನ್ನು ವಿವರಿಸುವ ಫಲಕವನ್ನು ಸಹ ಸ್ಥಾಪಿಸಲಾಯಿತು.
Published 24 ಏಪ್ರಿಲ್ 2023, 6:42 IST
Last Updated 24 ಏಪ್ರಿಲ್ 2023, 6:42 IST
ಅಕ್ಷರ ಗಾತ್ರ

ಸಿಡ್ನಿ: ಸಿಡ್ನಿ ಕ್ರಿಕೆಟ್‌ ಮೈದಾನ ಪ್ರವೇಶ ದ್ವಾರಗಳಿಗೆ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ಬ್ರಿಯಾನ್‌ ಲಾರಾ ಹಾಗೂ ಡಾನ್ ಬ್ರಾಡ್ಮನ್ ಅವರ ಹೆಸರಿಡಲಾಗಿದೆ.

ಈ ‍‍ಪ್ರವೇಶ ದ್ವಾರದ ಮೂಲಕ ಆಟಗಾರರು ಹಾಗೂ ಪ್ರವಾಸಿಗರು ಹಾದು ಹೋಗಲಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಅವರ 50ನೇ ವರ್ಷದ ಹುಟ್ಟುಹಬ್ಬ ಹಾಗೂ ಈ ಕ್ರೀಡಾಂಗಣದಲ್ಲಿ ಬ್ರಿಯಾನ್‌ ಲಾರಾ ಅವರು ಗಳಿಸಿದ ತಮ್ಮ ಮೊದಲ ಟೆಸ್ಟ್‌ ಶತಕಕ್ಕೆ (277 ರನ್‌) 30 ವರ್ಷ ತುಂಬಿದ ಹಿನ್ನಲೆಯಲ್ಲಿ ಅವರಿಬ್ಬರಿಗೆ ಈ ವಿಶೇಷ ಗೌರವ ಸಲ್ಲಿಸಲಾಗಿದೆ.

ನನ್ನ ಮತ್ತು ನನ್ನ ಸ್ನೇಹಿತ ಬ್ರಿಯಾನ್ ಲಾರಾ ಅವರ ಹೆಸರನ್ನು ಪ್ರವೇಶ ದ್ವಾರಕ್ಕೆ ಇಟ್ಟಿರುವುದು ಒಂದು ದೊಡ್ಡ ಗೌರವವಾಗಿದೆ. ನಾನು ಎಸ್‌ಸಿಹಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾಗೆ ಧನ್ಯವಾದ ಹೇಳಲು ಬಯಸುತ್ತೇನೆ. ಶೀಘ್ರದಲ್ಲೇ ಎಸ್‌ಸಿಜಿಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ
ಸಚಿನ್‌ ತೆಂಡೂಲ್ಕರ್‌

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಟಗಾರರು ಡಾನ್‌ ಬ್ರಾಡ್ಮನ್‌ ಗೇಟ್‌ ಮೂಲಕ ಕ್ರೀಡಾಂಗಣಕ್ಕೆ ಪ್ರವೇಶಿಸಲಿದ್ದು, ವೀಕ್ಷಕರು ಅಥವಾ ಪ್ರವಾಸಿಗರು ಸಚಿನ್‌–ಲಾರ ಹೆಸರಿನ ಗೇಟ್‌ಗಳ ಮೂಲಕ ಕ್ರೀಡಾಂಗಣಕ್ಕೆ ಪ್ರವೇಶಿಸಲಿದ್ದಾರೆ.

ಲಾರಾ-ತೆಂಡೂಲ್ಕರ್ ಗೇಟ್‌ನಲ್ಲಿ, ಈ ಇಬ್ಬರು ದಂತಕಥೆಗಳ ಸಾಧನೆಗಳು ಮತ್ತು ಸಿಡ್ನಿ ಮೈದಾನದಲ್ಲಿ ಅವರ ಅಂಕಿಅಂಶಗಳನ್ನು ವಿವರಿಸುವ ಫಲಕವನ್ನು ಸಹ ಸ್ಥಾಪಿಸಲಾಯಿತು.

ಈ ಮೈದಾನದಲ್ಲಿ ನನಗೆ ಹಾಗೂ ನನ್ನ ಕುಟುಂಬಕ್ಕೆ ವಿಶೇಷವಾದ ನೆನಪುಗಳಿವೆ. ಆಸ್ಟ್ರೇಲಿಯಾದಲ್ಲಿ ಇದ್ದಾಗೆಲ್ಲಾ ಇಲ್ಲಿಗೆ ಭೇಟಿ ನೀಡುವುದಕ್ಕೆ ನಾನು ಸಂತೋಷ ಪಡುತ್ತೇನೆ. ಇದು ನನಗೆ ಸಿಕ್ಕ ದೊಡ್ಡ ಗೌರವಾಗಿದೆ‘ ಎಂದು ಬ್ರಿಯಾನ್‌ ಲಾರಾ ಹೇಳಿದ್ದಾರೆ.

‘ಇದು ಇಲ್ಲಿಗೆ ಭೇಟಿ ನೀಡುವ ಅಂತರರಾಷ್ಟ್ರೀಯ ಕ್ರಿಕೆಟ್‌ ಆಟಗಾರರಿಗೆ ಮಾತ್ರ ಸ್ಫೂರ್ತಿಯಾಗುವುದಲ್ಲದೆ, ಭವಿಷ್ಯದಲ್ಲಿ ಸಿಡ್ನಿ ಮೈದಾನಕ್ಕೆ ಭೇಟಿ ನೀಡುವ ಎಲ್ಲಾ ಆಟಗಾರರಿಗೂ ಸ್ಫೂರ್ತಿ ತುಂಬಲಿದೆ‘ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಹೇಳಿದೆ.

‘ನನ್ನ ಮತ್ತು ನನ್ನ ಸ್ನೇಹಿತ ಬ್ರಿಯಾನ್ ಅವರ ಹೆಸರನ್ನು ಪ್ರವೇಶ ದ್ವಾರಕ್ಕೆ ಇಟ್ಟಿರುವುದು ಒಂದು ದೊಡ್ಡ ಗೌರವವಾಗಿದೆ. ನಾನು ಎಸ್‌ಸಿಹಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಶೀಘ್ರದಲ್ಲೇ ಎಸ್‌ಸಿಜಿಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ‘ ಎಂದು ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ.

ಸಚಿನ್‌ ತೆಂಡೂಲ್ಕರ್ ಈ ಮೈದಾನದಲ್ಲಿ 5 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 157ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ.

‘ಈ ಮೈದಾನದಲ್ಲಿ ನನಗೆ ಹಾಗೂ ನನ್ನ ಕುಟುಂಬಕ್ಕೆ ವಿಶೇಷವಾದ ನೆನಪುಗಳಿವೆ. ಆಸ್ಟ್ರೇಲಿಯಾದಲ್ಲಿ ಇದ್ದಾಗೆಲ್ಲಾ ಇಲ್ಲಿಗೆ ಭೇಟಿ ನೀಡುವುದಕ್ಕೆ ನಾನು ಸಂತೋಷ ಪಡುತ್ತೇನೆ. ಇದು ನನಗೆ ಸಿಕ್ಕ ದೊಡ್ಡ ಗೌರವಾಗಿದೆ‘ ಎಂದು ಬ್ರಿಯಾನ್‌ ಲಾರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT