ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‍ನ್ನು ಆಟದಲ್ಲಿ ಸೋಲಿಸಬೇಕು, ಸುಮ್ಮನೆ 2 ಪಾಯಿಂಟ್ ಬಿಟ್ಟುಕೊಡಬಾರದು: ಸಚಿನ್

Last Updated 22 ಫೆಬ್ರುವರಿ 2019, 14:20 IST
ಅಕ್ಷರ ಗಾತ್ರ

ಮುಂಬೈ: ಮುಂಬರುವ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಆಟವಾಡದೆ ಅವರಿಗೆ ಸುಮ್ಮನೆ 2 ಪಾಯಿಂಟ್ ಸಿಗುವಂತೆ ಮಾಡುವುದು ನನಗೆ ಇಷ್ಟವಿಲ್ಲಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಸುನಿಲ್ ಗವಾಸ್ಕರ್ ಅವರ ಅಭಿಪ್ರಾಯವನ್ನು ಬೆಂಬಲಿಸಿರುವ ಸಚಿನ್, ಜೂನ್ 16ರಂದು ನಡೆಯಲಿರುವ ಪಾಕ್- ಭಾರತ ನಡುವಿನ ಪಂದ್ಯಾಟದಲ್ಲಿ ಪಾಕಿಸ್ತಾನವನ್ನು ಸೋಲಿಸಬೇಕು ಎಂದಿದ್ದಾರೆ.

ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸುತ್ತಲೇ ಬಂದಿದೆ.ಇನ್ನೊಂದು ಬಾರಿ ಸೋಲಿಸುವ ಅವಕಾಶ ಇದೀಗ ಬಂದಿದೆ.ಅವರೊಂದಿಗೆ ಆಟವಾಡದೆ ಸುಮ್ಮನೆ 2 ಪಾಯಿಂಟ್ ಸಿಗುವಂತೆ ಮಾಡಿದರೆ ಅದು ಅವರಿಗೆ ಲಾಭವಾಗುತ್ತದೆ.ಇದು ನನಗೆ ಇಷ್ಟವಿಲ್ಲ ಎಂದು ಸಚಿನ್ ಟ್ವೀಟಿಸಿದ್ದಾರೆ.

ನನಗೆ ಯಾವತ್ತೂ ನನ್ನ ದೇಶ ಮೊದಲು. ಹಾಗಾಗಿ ನನ್ನ ದೇಶ ಏನು ನಿರ್ಧರಿಸುತ್ತದೆಯೋಅದನ್ನು ನಾನು ಮನಪೂರ್ವಕ ಬೆಂಬಲಿಸುವೆ ಎಂದು ಸಚಿನ್ ಹೇಳಿದ್ದಾರೆ.

ಏತನ್ಮಧ್ಯೆ, ಪಾಕ್ ಜತೆಗಿನ ಪಂದ್ಯವನ್ನು ಬಹಿಷ್ಕರಿಸಬೇಕೆಂದು ಹರ್ಭಜನ್ ಸಿಂಗ್, ಯುಜವೇಂದ್ರ ಚಹಾಲ್ ಒತ್ತಾಯಿಸಿದ್ದು , ಪಾಕ್ ಜತೆ ಆಡದಿದ್ದರೆ ಅದುಭಾರತಕ್ಕೆ ನಷ್ಟ ಎಂದು ಗವಾಸ್ಕರ್ ಹೇಳಿದ್ದರು.

ಮೇ 30ರಂದು ವಿಶ್ವಕಪ್ ಕ್ರಿಕೆಟ್ ಆರಂಭವಾಗಲಿದ್ದು ಜೂನ್ 16ರಂದು ಭಾರತ ಮತ್ತು ಪಾಕ್ ನಡುವಿನ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT