ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಜಯನ್, ಯಶಸ್‌ ಮಿಂಚು: ಡಿಪಿಎಸ್‌ಗೆ ಜಯ

Published 5 ಜೂನ್ 2024, 15:35 IST
Last Updated 5 ಜೂನ್ 2024, 15:35 IST
ಅಕ್ಷರ ಗಾತ್ರ

ಬೆಂಗಳೂರು: ಜಯನ್‌ ಮತ್ತು ಯಶಸ್‌ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ (ಡಿಪಿಎಸ್‌) ಸೌತ್‌ ತಂಡವು ಗೋಪಾಲನ್‌ ಸ್ಪೋರ್ಟ್ಸ್‌ ಸೆಂಟರ್‌ ಆಶ್ರಯದಲ್ಲಿ ನಡೆಯುತ್ತಿರುವ ಸೇವ್‌ ವಾಟರ್‌ ಕಪ್‌ 7ನೇ ಆವೃತ್ತಿಯ 16 ವರ್ಷದೊಳಗಿನವರ ಪಂದ್ಯದಲ್ಲಿ 82 ರನ್‌ಗಳಿಂದ ಕಪಿಲ್‌ ಸಿ.ಎ. ತಂಡವನ್ನು ಮಣಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡಿಪಿಎಸ್‌ ತಂಡವು ಕಿಶನ್‌ (58; 40ಎ) ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 158 ರನ್‌ ಕಲೆಹಾಕಿತು. ಗುರಿಯನ್ನು ಬೆನ್ನಟ್ಟಿದ ಕಪಿಲ್‌ ತಂಡವು ಜಯನ್‌ (8ಕ್ಕೆ 4) ಮತ್ತು ಯಶಸ್‌ (8ಕ್ಕೆ 3) ದಾಳಿಗೆ ತತ್ತರಿಸಿತು. ಹೀಗಾಗಿ, 18.4 ಓವರ್‌ಗಳಲ್ಲಿ 76 ರನ್‌ಗೆ ಕುಸಿಯಿತು.

ಸಂಕ್ಷಿಪ್ತ ಸ್ಕೋರ್‌: ಡಿಪಿಎಸ್‌ ಸೌತ್: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 158 (ಕಿಶನ್‌ 58, ಧ್ರುವ್‌ 41, ಜಯನ್‌ 26; ಧ್ರುವ್‌ ಎ. 24ಕ್ಕೆ 2). ಕಪಿಲ್‌ ಸಿ.ಎ: 18.4 ಓವರ್‌ಗಳಲ್ಲಿ 76 (ಧ್ರುವ್‌ ಎ. 24, ಜಯನ್‌ 8ಕ್ಕೆ 4, ಯಶಸ್‌ 8ಕ್ಕೆ 3). ಫಲಿತಾಂಶ: ಡಿಪಿಎಸ್‌ ತಂಡಕ್ಕೆ 82 ರನ್‌ಗಳ ಜಯ

ಜೆಎಚ್‌ಎಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 160 (ಲೇಶಾನ್‌ 60, ಬೆಂಜಮಿನ್‌ 35, ಸೂರಜ್‌ 25ಕ್ಕೆ 3, ಚಿನ್ಮಯ್‌ 14ಕ್ಕೆ 2). ಟಿಸಿಎ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 106 (ಗಗನ್‌ ಕುಮಾರ್ 45, ಆರ್ಯನ್‌ಸಿನ್ಹ್‌ 13ಕ್ಕೆ 4, ಆರ್ಯ 19ಕ್ಕೆ 3). ಫಲಿತಾಂಶ: ಜೆಎಚ್‌ಎಸ್‌ ತಂಡಕ್ಕೆ 54 ರನ್‌ಗಳ ಜಯ

ಆರ್‌ಎಕ್ಸ್‌ಸಿಎ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 136 (ಮಿಲನ್‌ ಧಾಮಿ 41, ಸಿದ್ಧಾರ್ಥ್ 24, ಚಿನ್ಮಯಿ 20ಕ್ಕೆ 2, ಕುಶಾಲ್‌ 21ಕ್ಕೆ 2). ಟಿಸಿಎ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 133 (ಗಗನ್‌ ಕುಮಾರ್ 66, ಚಾರ್ವಿಕ್  39, ಮಿಲನ್‌ ಧಾಮಿ 25ಕ್ಕೆ 2). ಫಲಿತಾಂಶ: ಆರ್‌ಎಕ್ಸ್‌ಸಿಎ ತಂಡಕ್ಕೆ 3 ರನ್‌ಗಳ ಜಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT